ಹನೂರು: ಹಸಿರು ಕರ್ನಾಟಕ ಆಂದೋಲನದ ಜಾಗೃತಿಗಾಗಿ ಬೀದಿ ನಾಟಕ

Update: 2018-08-16 17:50 GMT

ಹನೂರು,ಆ.16: ಅರಣ್ಯ ಇಲಾಖೆ ಮತ್ತು ಚೇತನಾ ಕಲಾ ವಾಹಿನಿ ತಂಡದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಹಸಿರು ಕರ್ನಾಟಕ ಆಂದೋಲನದ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದ ಕುರಿತು ವಲಯ ಅರಣ್ಯ ಅಧಿಕಾರಿ ರುಫಿಯಾ ಪರ್ವಿನ್ ಮಾತನಾಡಿ, ಹಸಿರೇ ಉಸಿರು ಎಂಬುವುದು ದೈವದತ್ತ ಸತ್ಯವಾಗಿದ್ದು, ನಿಸರ್ಗ ಪ್ರತಿ ಮನುಷ್ಯನಿಗೂ ಆಸರೆಯಾಗಿದೆ. ಅರಣ್ಯ ಸಂಪತ್ತನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹಸಿರು ಕರ್ನಾಟದ ಆಂದೋಲನಕ್ಕೆ  ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರೂ ಸಹ ಮನೆಗೊಂದು ಮರ ನೆಡುವ ಮುಖಾಂತರ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಚಾಮರಾಜನಗರ ಚೇತನಾ ಕಲಾ ವಾಹಿನಿ ತಂಡದ ವತಿಯಿಂದ ಹಮ್ಮಿಕೊಂಡಿದ್ದ ನಾಟಕದಲ್ಲಿ ಹಸಿರಿದ್ದರೆ ಮಾತ್ರ ಉಸಿರು, ಹಾಗಾಗಿ ಮನೆಯಂಗಳದಲ್ಲಿ, ಹೊಲ ಗದ್ದೆ, ತೋಟ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಟ್ಟು ಪರಿಸರವನ್ನು ಉಳಿಸಲು ಮುಂದಾಗಿ ಎಂಬ ಸಂದೇಶವನ್ನು ನೀಡಿದರು.

ಈ ಸಂದರ್ಭ ಉಪವಲಯದ ಅರಣ್ಯಾಧಿಕಾರಿಗಳು ಹನೂರು ಬಫರ್ ವಲಯದ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News