ಚಂದ್ರಗ್ರಹಣದ ವೇಳೆ ಸರಣಿಗಳ್ಳತನ: ಕರ್ತವ್ಯಲೋಪ ಎಸಗಿದ ಪೊಲೀಸ್ ಹೆಡ್‍ಕಾನ್ಸ್ ಟೇಬಲ್ ಅಮಾನತು

Update: 2018-08-17 16:49 GMT

ಮೈಸೂರು,ಆ.17: ಚಂದ್ರಗ್ರಹಣದ ವೇಳೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿಗಳ್ಳತನಕ್ಕೆ ಸಂಬಂಧಿಸಿದಂತೆ ಕುವೆಂಪುನಗರದ ಪೊಲೀಸ್ ಹೆಡ್ ಕಾನ್ಸಟೇಬಲ್ ಓರ್ವರನ್ನು ಅಮಾನತುಗೊಳಿಸಲಾಗಿದೆ.

ಹೆಡ್ ಕಾನ್ಸ್ ಟೇಬಲ್ ರವಿಕುಮಾರ್ ಎಂಬವರೇ ಅಮಾನತುಗೊಂಡವರು. ಕಳ್ಳತನ ನಡೆದ ಸ್ಥಳದಲ್ಲಿ ಅವರನ್ನು ರಾತ್ರಿ ಗಸ್ತಿಗೆ ನಿಯೋಜಿಸಲಾಗಿತ್ತು. ಕಳ್ಳತನವಾಗಿರುವ ಕುರಿತಾದ ತನಿಖೆ ನಡೆಸಿದ ವೇಳೆ ರವಿಕುಮಾರ್ ಅವರು ಕರ್ತವ್ಯ ಲೋಪ ಎಸಗಿದ್ದು ತಿಳಿದುಬಂದಿದೆ ಎನ್ನಲಾಗಿದ್ದು, ಇದರಿಂದಾಗಿ ಅವರನ್ನು ಅಮಾನತುಪಡಿಸಲಾಗಿದೆ. ಆದರೆ ರವಿಕುಮಾರ್ ಅವರು ಅಮಾನತು ಆದೇಶವನ್ನು ತೆಗೆದುಕೊಳ್ಳದೇ ಉದ್ಧಟತನ ತೋರಿದ್ದು, ಅವರ ಮನೆಯ ಮುಂದೆ ಅಮಾನತು ಆದೇಶದ ಪ್ರತಿಯನ್ನು ಅಂಟಿಸಲಾಗಿದೆ. ವಿಳಾಸಕ್ಕೆ ನೋಂದಾಯಿತ ಅಂಚೆಯಲ್ಲಿ ಆದೇಶದ ಪ್ರತಿಯನ್ನು ಕೂಡ ಕಳುಹಿಸಲಾಗಿದೆ ಎನ್ನಲಾಗಿದೆ.

ಅಂಗಡಿಗಳ ಕಳ್ಳತನಕ್ಕೆ ಕಾರು ಬಳಸಿ ಕಳ್ಳರು ಅಂಗಡಿಗಳ ಶೆಟರ್ ಎಳೆದಿದ್ದರು. ಎಲ್ಲ ಕಳ್ಳತನಗಳೂ ಒಂದೇ ರೀತಿಯಲ್ಲಿ ನಡೆದಿತ್ತು. ಇದರಿಂದಾಗಿ ಸಾರ್ವಜನಿಕರು ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಸರಣಿ ಕಳ್ಳತನ ತಡೆಯಬಹುದಿತ್ತೆಂಬ ಮಾತು ಕೇಳಿ ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News