ಚಿಕ್ಕಮಗಳೂರು: ಜಿಲ್ಲಾ ಬಿಜೆಪಿಯಿಂದ ಅಗಲಿದ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ

Update: 2018-08-17 18:21 GMT

ಚಿಕ್ಕಮಗಳೂರು, ಆ.17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬೆಳಗೆ ಶದ್ಧಾಂಜಲಿ ಸಭೆ ನಡೆಸಲಾಯಿತು. 

ಬಿಜೆಪಿ ವಿಭಾಗ ಮಟ್ಟಣಧ ಸಂಘಟನಾ ಕಾರ್ಯದರ್ಶಿ ಗಣೇಶ್ ರಾಯ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿ, ಒಂದು ಕಾಲದಲ್ಲಿ ರಾಜಕೀಯ ಕ್ಷೇತ್ರದಲ್ಲಿ ವಿಶ್ವಾಸ ಮತ್ತು ನಂಬಿಕೆ ಇತ್ತು. ಆದರೆ ಬರುಬರುತ್ತಾ ಜನರು ರಾಜಕಾರಣಿಗಳನ್ನು ಅಪಹಾಸ್ಯದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಾಲಘಟ್ಟದಲ್ಲಿ ರಾಜಕೀಯಕ್ಕೆ ಶ್ರದ್ಧೆ, ಗೌರವ ತಂದು ಕೊಟ್ಟ ಮುತ್ಸದ್ಧಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಎಂದು ಬಣ್ಣಿಸಿದರು. 

ವಾಜಿಪೇಯಿ ಅವರು ಮುಸ್ಸದ್ಧಿ ರಾಜಕಾರಣಿ ಮಾತ್ರವಾಗಿರದೇ, ಆದರ್ಶ ಸ್ವಯಂ ಸೇವಕ, ಕವಿ, ವಾಗ್ಮಿ, ಸಂಸದೀಯಪಟು, ಉತ್ತಮ ಆಡಳಿತಗಾರ, ಪತ್ರಕರ್ತರಾಗಿಯೂ ಛಾಪು ಮೂಡಿಸಿದ್ದಾರೆ ಎಂದ ಅವರು, ವಾಜಪೇಯಿ ಅವರ ನಡುವಳಿಕೆ ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದರು.

ಬಿಜೆಪಿ ಮುಖಂಡ  ಪ್ರೇಮ್ ಕುಮಾರ್ ಮಾತನಾಡಿ, ವಾಜಪೇಯಿ ಅವರನ್ನು ಭೌತಿಕವಾಗಿ ನಾವು ಕಳೆದುಕೊಂಡಿದ್ದೇವೆ. ಅವರ ಆದರ್ಶ, ಸಂಘಟನಾ ಚತುರತೆ, ಆಡಳಿತ ನಮ್ಮ ಕಣ್ಣಮುಂದಿದೆ. ಪೋಖ್ರಾನ್ ಅಣುಬಾಂಬ್ ಪ್ರಯೋಗಿಕ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆಸಿದ್ದ ಅವರು, ನೆರೆಯ ಪಾಕಿಸ್ಥಾನದೊಂದಿಗೆ ಸೌಹಾರ್ದ ಬಯಸಿ ಉತ್ತಮ ಬಾಂಧವ್ಯ ಹೊಂದುವಲ್ಲಿ ಶ್ರಮಿಸಿದ್ದಾರೆ. ಈ ಮೂಲಕ ವಿಶ್ವಕ್ಕೆ ಭಾರತದ ಶಕ್ತಿ ಏನೆಂದು ತೋರಿಸಿದ್ದಾರೆ ಎಂದರು.

ಮುಖಂಡ ಮಂಜುನಾಥ್ ಕಾಮತ್ ಮಾತನಾಡಿ, ವಾಜಪೇಯಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಎದುರಿಸಿ ಪಕ್ಷ ಸಂಘಟಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವರು ಎಲ್ಲ ಪಕ್ಷದವರಿಗೂ ಮಾದರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಒಂದು ನಿಮಿಷಗಳ ಕಾಲ ವಾಜಪೇಯಿ ಆತ್ಮಕ್ಕೆ ಶಾಂತಿಕೋರಿ ಮೌನಚಾರಣೆ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಡಿ.ತಮ್ಮಯ್ಯ, ವರಸಿದ್ದಿ ವೇಣುಗೋಪಾಲ್, ನಗರಸಭೆ ಸದಸ್ಯೆ ಶ್ಯಾಮಲಾ ರಾವ್, ರಾಜಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News