ಹನೂರು: ಮಹಿಳಾ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ

Update: 2018-08-18 17:21 GMT

ಹನೂರು,ಆ.18: ಹಾಲು ಉತ್ಪಾದಕರು ಕಲಬೆರಕೆ ಹಾಲು ಹಾಕದೆ ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೆಕೆಂದು ಚಾ.ನಗರ ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷ ಗುರುಮಲ್ಲಪ್ಪ ತಿಳಿಸಿದರು.

ಹನೂರು ಸಮೀಪ ವೈಶ್ಯಂಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮೊದಲಿಗೆ ಕಾರ್ಯದರ್ಶಿ ಲೆಕ್ಕ ಪತ್ರ ಮಂಡಿಸಿ ಈ ಸಂಘವು 3,38,701 ರೂ. ನಿವ್ವಳ ಲಾಭ ಹೊಂದಿದೆ ಎಂದರು  

ನಂತರ ಮಾತನಾಡಿದ ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ಹೆಚ್ಚು ಹಾಲು ಪೂರೈಸಿದ ಉತ್ಪಾದಕರಿಗೆ ಬೋನಸ್ ನೀಡುತ್ತಿರುವುದು ಸರಿಯಾದ ಕ್ರಮವಾಗಿದ್ದು, ಕಳೆದ ಸಾಲಿಗಿಂತ ಈ ಅವಧಿಯಲ್ಲಿ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಮುಂದಿನ ವರ್ಷ ನಿರ್ದಿಷ್ಟ ಲಾಭದ ಗುರಿಯನ್ನು ಹೊಂದಿಕೊಳ್ಳುವಂತೆ ತಿಳಿಸಿದರು. ಗುಣಮಟ್ಟದ ಹಾಲು ಪೂರೈಸಿದ ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಂಘದ ಸದಸ್ಯರಿಗೆ ಬಹುಮಾನ ನೀಡುತ್ತಿರುವುದು ಸಂತೋಷದ ವಿಷಯ ಹಾಗೂ ಶೈಕ್ಷಣಿಕ ಸಾಲಿನ ಉತ್ತಮ ಮಹಿಳಾ ಸಹಕಾರ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದ ಅವರು, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಡೇರಿ ಹಾಗೂ ಒಕ್ಕೂಟವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.

ಒಕ್ಕೂಟದ ಉಪವ್ಯವಸ್ಥಾಪಕ ಶರತ್‍ಕುಮಾರ್ ಸಂಘದಿಂದ ಸದಸ್ಯರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಹೆಚ್ಚು ಹಾಲು ಪೂರೈಕೆ,  ಗುಣಮಟ್ಟ ಕಾಯ್ದಿರಿಸಿದ ಹಾಗೂ ಹಾಲು ಉತ್ಪಾದಕರನ್ನು ಗೌರವಿಸಿ ಕಿರು ಬಹುಮಾನವನ್ನು ನೀಡಲಾಯಿತು. ಅಲ್ಲದೇ, ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಮುಂದಿನ ವರ್ಷದಲ್ಲೂ ಸಹ ಡೇರಿಗೆ ಒದಗಿಸುವಂತೆ ಸಂಘದ ಕಾರ್ಯದರ್ಶಿ ವಿನಂತಿಸಿದರು 

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ನಂಜಂಡಸ್ವಾಮಿ, ಪ್ರಭಾರ ವ್ಯವಸ್ಥಾಪಕ ಡಾ. ಎಂ.ಸಿ.ಆನಂದ್‍ರಾಜ್, ಉಪ ವ್ಯವಸ್ಥಾಪಕ ಹೆಚ್.ಸಿ. ಶರತ್‍ಕುಮಾರ್, ವಿಸ್ತರಣಾಧಿಕಾರಿ ಎಂ.ವೆಂಕಟೇಶ್, ತಮಿಳು ಸಂಘದ ಅಧ್ಯಕ್ಷ ಅರಸಪ್ಪನ್, ಸಂಘದ ಅಧ್ಯಕ್ಷೆ ಕೆ.ರಾಧ, ಉಪಾದ್ಯಕ್ಷೆ ಮೆಹರ್‍ಜಾನ್, ಕಾರ್ಯದರ್ಶಿ ಕೆ.ರಾಜಮಣಿ, ಹಾಲು ಪರೀಕ್ಷಕ ಎನ್.ಸೆಲ್ವಂ, ಸಹಾಯಕ ಮಾಧುಸ್ವಾಮಿ, ಶುಚಿಕರು ನಾಗಮ್ಮ, ಸದಸ್ಯರಾದ ಪಿ.ಸರಸ್ವತಿ, ಎಸ್.ಚಂದ್ರ, ಎಂ.ವಸಂತ, ಕಣ್ಣಮ್ಮ, ನಲ್ಲಮ್ಮ, ಮಹೇಶ್ವರಿ, ಕುಂಜಮ್ಮ, ಎಸ್.ಲತಾ, ಜಯ ಹಾಗೂ ಹಾಲು ಉತ್ಪಾದಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News