‘ವಿದೇಶಿ ಆಕ್ರಮಣ’ ನಿಲ್ಲದೆ ಶಾಂತಿಯಿಲ್ಲ: ತಾಲಿಬಾನ್

Update: 2018-08-18 17:30 GMT

ಕಾಬೂಲ್, ಆ. 18: ‘ವಿದೇಶಿ ಆಕ್ರಮಣ’ ಮುಂದುವರಿಯುವವರೆಗೂ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ತಾಲಿಬಾನ್ ನಾಯಕ ಮೌಲ್ವಿ ಹೈಬತುಲ್ಲಾ ಅಖುನ್‌ಝಾದಾ ಹೇಳಿದ್ದಾನೆ.

17 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಅಮೆರಿಕದೊಂದಿಗಿನ ನೇರ ಮಾತುಕತೆಯ ಮೂಲಕವಷ್ಟೇ ನಿಲ್ಲಿಸಬಹುದಾಗಿದೆ ಎಂದು ಆತ ಹೇಳಿದ್ದಾನೆ.

 ಈದುಲ್ ಅಝ್‌ಹಾ ರಜೆಯ ಸಂದರ್ಭದಲ್ಲಿ ನೀಡಿದ ಸಂದೇಶವೊಂದರಲ್ಲಿ ಆತ ಈ ಮಾತುಗಳನ್ನು ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News