ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಎಸ್ಡಿಪಿಐ ಯ 13 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2018-08-18 17:50 GMT

ಮೈಸೂರು,ಆ.18: ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕಲ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸ್ಪರ್ಧಿಸುತ್ತಿರುವ 13 ಜನ ಅಭ್ಯರ್ಥಿಗಳ ಪಟ್ಟಿಯನ್ನು ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಕಮಿಟಿ ಸದಸ್ಯ ಅಮ್ಜದ್ ಖಾನ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ ದೀಪಕ್ ಅವರು ವಾಡ್ ನಂ. 15ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅದರಂತೆ, ವಾರ್ಡ್ ನಂ.10 ರಲ್ಲಿ ಮೊಹಮ್ಮದ್ ಮುಝುಮ್ಮಿಲ್, ನಂ.12 ಹಾಜಿ ನಸ್ರುಲ್ಲಾ, ನಂ.14 ಮುಹೀಬ್, 17 ಸುಮಯ್ಯ ಫಿರ್ದೌಸ್, 25 ಮುಝಮ್ಮಿಲ್, 26 ಅಸ್ಮಾ ಖಾನಂ, 27 ಮೊಹಮ್ಮದ್ ತೌಸಿಫ್, 29 ಝಹೀರ್, 31 ಮತೀನ್ ಬೇಗ್, 33 ಹಾಫೀಜ್ ಮುಬಾರಕ್, 38 ರಿತೇಸ್ ಹಾಗೂ ವಾರ್ಡ ನಂ. 39ರಲ್ಲಿ ಎಸ್.ಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.

ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು ಇಂದು ಅಥವಾ ನಾಳೆಯಲ್ಲಿ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು. ಇತರೆ ಪಕ್ಷಗಳಿಗಿಂತ ಭಿನ್ನವಾಗಿರುವ ಎಸ್ ಡಿಪಿಐ ಎಲ್ಲಾ ವರ್ಗದ ಸಾಮಾನ್ಯರಿಗೆ ರಾಜಕೀಯ ವೇದಿಕೆ ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ಪುಟ್ಟನಂಜಯ್ಯ, ಕುಮಾರಸ್ವಾಮಿ, ಕೌಶನ್ ಬೇಗ್, ಆಜಂಪಾಷಾ, ತಬ್ರೀಜ್ ಸೇಠ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News