ಮಂಡ್ಯ: ಪ್ರವಾಹ ಸಂತ್ರಸ್ತರಿಗಾಗಿ ಜಿಲ್ಲಾಡಳಿತದಿಂದ ನೆರವು ಸ್ವೀಕಾರ ಕೇಂದ್ರ ಸ್ಥಾಪನೆ

Update: 2018-08-18 18:14 GMT

ಮಂಡ್ಯ, ಆ.19: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವು ನೀಡಲು ಜಿಲ್ಲಾಡಳಿತ ನಗರದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ನೆರವು ಸ್ವೀಕರಿಸಲು ಸಂಗ್ರಹ ಕೇಂದ್ರವನ್ನು ಸ್ಥಾಪಿಸಿದೆ.

ಸ್ವ-ಇಚ್ಚೆಯಿಂದ, ಸಂಘ ಸಂಸ್ಥೆಗಳಿಂದ, ಸಾರ್ವಜನಿಕರಿಂದ ನೆರೆ ಸಂತ್ರಸ್ಥರಿಗೆ ನೀಡುವ ದೇಣಿಗೆ, ಆಹಾರ ಸಾಮಾಗ್ರಿ, ಉಪಯೋಗಿಸದ ವಸ್ತ್ರ ಇತ್ಯಾದಿಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದಲ್ಲಿ  ಕೌಂಟರ್ ತೆರೆಯಲಾಗಿದೆ. 

ಮಂಡ್ಯ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಬೇರಪ್ಪ ಅವರಿಗೆ ನೆರವಿಗೆ ಬರುವ ವಸ್ತುಗಳ ಸಂಗ್ರಹದ ಜವಾಬ್ದಾರಿಯನ್ನು ನೀಡಲಾಗಿದ್ದು, ನೆರವು ನೀಡಲು ಇಚ್ಚಿಸುವ ದಾನಿಗಳು ದೂರವಾಣಿ ಸಂಖ್ಯೆ 08232-231111 ಅಥವಾ ಮೊಬೈಲ್ ಸಂಖ್ಯೆ 8073995839 ಕರೆಮಾಡಿ ನೆರವನ್ನು ನೀಡಬಹುದು. ಧನಸಹಾಯ ಮಾಡಲು ಮುಂದಾಗುವ ಸಾರ್ವಜನಿಕರಿಗೆ “ಕೊಡಗು ಫ್ಲಡ್ ರಿಲೀಫ್ ಫಂಡ್- ಮಂಡ್ಯ” ಹೆಸರಿಗೆ ವಿಜಯ ಬ್ಯಾಂಕ್‍ನಲ್ಲಿ ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದ್ದು, ಖಾತೆ ಸಂಖ್ಯೆ 114101101000054 ಗೆ (IFSC CODE: VIJB0001141) ಹಣವನ್ನು ಜಮೆ ಮಾಡಬಹುದು.

ಈಗಾಗಲೇ ಜಿಲ್ಲೆಯ ಜನತೆ ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ಸಹಾಯ ಹಸ್ತ ನೀಡಲು ಮುಂದಾಗಿರುವುದನ್ನು ಜಿಲ್ಲಾಡಳಿತ ಶ್ಲಾಘಿಸಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವಿಗೆ ಜನರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮನವಿ ಮಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News