4 ಕಡೆ ಗುಡ್ಡ ಕುಸಿತ: ಕಳಸ – ಮಂಗಳೂರು ಹೆದ್ದಾರಿ ಬಂದ್

Update: 2018-08-19 06:50 GMT

ಚಿಕ್ಕಮಗಳೂರು, ಆ.19: ಚಿಕ್ಕಮಗಳೂರು ಮತ್ತು ಮಲೆನಾಡಿನಲ್ಲಿ ಮತ್ತೆ ಗಾಳಿ,ಮಳೆ ಮುಂದುವರಿದಿದ್ದು, ರಾಜ್ಯ ಹೆದ್ದಾರಿ 66ರಲ್ಲಿ 4 ಕಡೆಗಳಲ್ಲಿ ಕುಸಿದಿದ್ದು, ಇದರ ಪರಿಣಾಮವಾಗಿ ಕಳಸ- ಮಂಗಳೂರು ನಡುವೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಗುಡ್ಡ ಕುಸಿತದಿಂದಾಗಿ ರಸ್ತೆಯಲ್ಲಿ ಬಿದ್ದಿರುವ ರಾಶಿರಾಶಿ ಮಣ್ಣನ್ನು ಕುದುರೆಮುಖ ಠಾಣಾ ಪೊಲೀಸರು ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆದ್ದಾರಿ ಬಂದ್ ಆಗಿರುವ ಹಿನ್ನೆಯಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಚಾರ್ಮಾಡಿ ಘಾಟಿಯಲ್ಲೂ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ವಾಹನಗಳು ಸಾಲುಗಟ್ಟಿ ನಿಂತಿವೆ.

ಜೋಡುಪಾಲದಲ್ಲಿ ಎನ್ ಡಿಆರ್ ಎಫ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾದಾಪುರ ಮಾರ್ಗದ ರಸ್ತೆ ಕುಸಿದಿದೆ. ಪ್ರವಾಹ  ಪೀಡಿತ ಮಡಿಕೇರಿಯ ಕುಶಾಲನಗರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಮಳೆ ಹಾನಿ , ಪರಿಹಾರ ಕಾರ್ಯದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News