×
Ad

ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2018-08-19 18:42 IST

ಬೆಂಗಳೂರು, ಆ. 19: ಆಡಳಿತದ ಹಿತದೃಷ್ಟಿಯಿಂದ ರಾಜ್ಯ ಸರಕಾರ ಒಟ್ಟು 16 ಮಂದಿ ಕೆಎಎಸ್ ಹಿರಿಯ ಮತ್ತು ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಎಚ್.ಪುಷ್ಪಲತಾ-ಅಪರ ಜಿಲಾಧಿಕಾರಿ ಕೋಲಾರ ಜಿಲ್ಲೆ, ಅನಿತಾ ಲಕ್ಷ್ಮಿ -ಆಯುಕ್ತರು ತುಮಕೂರು ಮಹಾನಗರ ಪಾಲಿಕೆ, ಎಸ್.ರಮ್ಯ-ಅಪರ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ, ಡಾ.ಎಸ್.ನವೀನ್‌ಕುಮಾರ್ ರಾಜು-ಜಂಟಿ ಆಯುಕ್ತರು ಪ್ರವಾಸೋದ್ಯಮ ಇಲಾಖೆ ಬೆಂಗಳೂರು.
ಗೀತಾ ಈ. ಕೌಲಗಿ-ಉಪವಿಭಾಗಾಧಿಕಾರಿ ಧಾರವಾಡ, ಪೂಜಾರ ವೀರಮಲ್ಲಪ್ಪ- ಆಯುಕ್ತರು, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ, ಎ.ನವೀನ್ ಜೋಸೆಫ್- ವಿಶೇಷ ಭೂಸ್ವಾಧೀನಾಧಿಕಾರಿ ಬಿಡಿಎ, ಶಂಕರಗೌಡ ಎಸ್.ಸೋಮನಾಳ-ವಿಶೇಷ ಭೂಸ್ವಾಧೀನಾಧಿಕಾರಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ.

ರೇಣುಕಾಂಬ-ಸಹಾಯಕ ನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು, ಆರ್.ಯಶೋಧ-ಉಪಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ ಬೆಂಗಳೂರು, ಟಿ.ರೇಖಾ-ಸದಸ್ಯ ಕಾರ್ಯದರ್ಶಿ ಅನಿವಾಸಿ ಭಾರತೀಯ ಸಮಿತಿ ಬೆಂಗಳೂರು.

ಬಿ.ಬಿ.ಸರೋಜ-ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ದಾವಣಗೆರೆ, ಜಿ.ವಿ. ನಾಗರಾಜು-ಸಹಾಯಕ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಎಸ್.ಸಿ.ರೇಣುಕಾಪ್ರಸಾದ್-ಸಹಾಯಕ ಆಯುಕ್ತ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಅರುಳ್‌ಕುಮಾರ್-ವಿಶೇಷ ಭೂಸ್ವಾಧೀನಾಧಿಕಾರಿ-2 ಕರ್ನಾಟಕ ಗೃಹ ಮಂಡಳಿ, ರಮೇಶ್ ಪಿ. ಕೋನರೆಡ್ಡಿ-ಉಪ ವಿಭಾಗಾಧಿಕಾರಿ ಬಳ್ಳಾರಿ ಉಪವಿಭಾಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News