ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಜನಪರ ಕಾಳಜಿ ಅಗತ್ಯ: ವಿ.ಪರಿಷತ್ ಸದಸ್ಯ ಧರ್ಮೇಗೌಡ

Update: 2018-08-20 12:27 GMT

ಚಿಕ್ಕಮಗಳೂರು,ಆ.20: ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡಲು ತಾಳ್ಮೆ, ಜನಪರ ಕಾಳಜಿ ಹಾಗೂ ನಿಷ್ಠೆ ಅತ್ಯಂತ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಧರ್ಮೇಗೌಡ ಅಭಿಪ್ರಾಯಿ ಸಿದ್ದಾರೆ.

ಅವರು ಸೋಮವಾರ ನಗರದ ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾಗಿ ವರ್ಗಾವಣೆಯಾಗಿರುವ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾದ ಕಾಂತರಾಜ್ ರವರ ಬೀಳ್ಕೊಂಡುಗೆ ಸಮಾರಂಭದಲ್ಲಿ  ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ಅಧಿ ಕಾರಿಗಳು ಸೇವೆ ಸಲ್ಲಿಸ ಬೇಕಾದರೆ ಅವರಿಗೆ ಜನಪರ ಕಾಳಜಿ ಬಹು ಮುಖ್ಯವಾಗ ಬೇಕು. ಕಾನೂನು ಮತ್ತು ಜನಪರ ನಿಲುವನ್ನು ಸರಿದೂಗಿಸಿಕೊಂಡು ಸಹಕಾರಿ ಗಳು ಮತ್ತು ಸಹಕಾರಿ ಕ್ಷೇತ್ರವನ್ನು ಉಳಿಸಿವ ನಿಟ್ಟಿನಲ್ಲಿ ಕಾರ್ಯ ನಿರ್ವಹಣ ಮಾಡಿದರೆ ಹೆಚ್ಚು ಯಶಸ್ಸು ಪಡೆಯಲು ಸಾಧ್ಯ ಎಂದರು.

ಡಿಸಿಸಿ ಬ್ಯಾಂಕಿನಲ್ಲಿ ಹಲವು ಕ್ಲಿಷ್ಠಕರ ಸಂದರ್ಭಗಳು ಎದುರಾಗುತ್ತದೆ. ಇತ್ತ ಕಾನೂನು ಮತ್ತು ರೈತರ ಹಿತಾಸಕ್ತಿ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಣೆ ಮಾಡು ವಲ್ಲಿ ಕಾಂತರಾಜ್ ರವರು ಯಶಸ್ವಿಯಾಗಿದ್ದಾರೆ. ಬ್ಯಾಂಕಿಗ್ ಕ್ಷೇತ್ರದ ಸವಾಲು ಗಳನ್ನು ಎದುರಿಸುವ ತಿಳುವಳಿಕೆ ಯನ್ನು ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಸಿಬ್ಬಂದಿಯು ಪಡೆದುಕೊಳ್ಳ ಬೇಕೆಂದರು.

ಕಾಂತರಾಜ್ ರವರು ಡಿ.ಸಿ.ಸಿ ಬ್ಯಾಂಕ್ ಅ ಗ್ರೇಡ್‍ಗೆ ಬರಲು ಸಾಕಷ್ಟು ಪ್ರಯತ್ನಗಳು ಮಾಡಿ ದ್ದಾರೆ. ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಅವರಿಗೆ ತೀವ್ರ ಕಳಕಳಿ ಇತ್ತು. ಅವರ ಜೊತೆಯಲ್ಲಿ ಕೆಲಸ ನಿರ್ವ ಹಿಸಿದ ಅನುಭವಗಳನ್ನು ಬ್ಯಾಂಕಿನ ಅಭಿವೃದ್ಧಿಗಾಗಿ ಉಳಿದ ಸಿಬ್ಬಂದಿಗಳು ಬಳಸಿಕೊಳ್ಳಬೇಕೆಂದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ, ಕಾಂತರಾಜ್, ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಣೆ ಮಾಡಿದ ಸಂದರ್ಭದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಬ್ಯಾಂಕಿನ ಅಡಳಿತ ಮಂಡಳಿ ಅಧ್ಯಕ್ಷರು,ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗ ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂತರಾಜ್‍ರವರನ್ನು ಬ್ಯಾಂಕ್ ಅಧ್ಯಕ್ಷರಾದ ಎಸ್.ಎಲ್.ಧರ್ಮೇ ಗೌಡರವರು ಸನ್ಮಾನಿಸಿದರು.

ಬ್ಯಾಂಕಿನ ನಿರ್ದೇಶಕರು ಗಳಾದ ಟಿ.ಇ.ಮಂಜುನಾಥ್, ರಾಮಜ್ಜ,ನೀಲೇಶ್ ಹಾಗೂ ಜಿಲ್ಲಾ ಸಹಕಾರ ಸಂಘಗಳ ನೂತನ ಉಪನಿಬಂಧಕರು ಹಾಗೂ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ನಾಗೇಶ್ ಡೋಂಗ್ರೆ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News