ಯಳಂದೂರು: ಕೊಡಗು ನೆರೆ ಸಂತ್ರಸ್ತರಿಗಾಗಿ ಯುವ ಕಾಂಗ್ರೆಸ್ ವತಿಯಿಂದ ನಿಧಿ ಸಂಗ್ರಹ

Update: 2018-08-20 17:58 GMT

ಯಳಂದೂರು,ಆ.20: ಕೊಡಗು ಜಿಲ್ಲೆಯಲ್ಲಿ ಜಲ ಪ್ರಳಯದಿಂದ ತತ್ತರಿಸಿರುವ ಸಂತ್ರಸ್ತರಿಗೆ ಸರ್ವರೂ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಕೊಳ್ಳೇಗಾಲ ಕ್ಷೇತ್ರ ಯುವ ಘಟಕದ ಅಧ್ಯಕ್ಷ ಅಬ್ದುಲ್ ಅಜೀದ್ ಮನವಿ ಮಾಡಿದರು.

ಅವರು ಪಟ್ಟಣದಲ್ಲಿ ಕೊಳ್ಳೇಗಾಲ ಯುವ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ಥರಿಗೆ ನಿಧಿ ಸಂಗ್ರಹಣೆ ನಂತರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಪ್ರಳಯ ಉಂಟಾಗಿ ಅಪಾರವಾದ ಪ್ರಾಣ ಹಾನಿ ಮತ್ತು ಅಪಾರವಾದ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದು, ಆಹಾರ, ಬಟ್ಟೆ, ವಸತಿ ಇಲ್ಲದೇ ಬಹಳ ಸಂಕಷ್ಟ ಪರಿಸ್ಥಿತಿ ಎದುರಿಸಿ ಜೀವನ ಕೈಯಲ್ಲಿಡಿದು ವಾಸಿಸುತ್ತಿದ್ದು, ಈ ಕಷ್ಟಕರವಾದ ಪರಿಸ್ಥಿತಿ ನೋಡಿ ಪ್ರತಿಯೊಬ್ಬರು ಸಹಾಯ ಮಾಡಬೇಕು ಎಂದರು.

ಪಟ್ಟಣದಲ್ಲಿ ಬೆಳಗ್ಗೆ ಮಾರಮ್ಮ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ನಿಧಿ ಸಂಗ್ರಹ ಪಟ್ಟಣದಲ್ಲಿನ ಅಂಗಡಿಗಳು, ಬೀದಿ ವ್ಯಾಪಾರಿಗಳು, ಸೇರಿದಂತೆ ಕೆ.ಕೆ.ರಸ್ತೆ, ಎಸ್.ಬಿ.ಎಂ. ವೃತ್ತ, ಬಳೇಪೇಟೆ, ಬಸ್ ನಿಲ್ದಾಣ, ಗಾಂಧೀ ಸರ್ಕಲ್, ಅಂಗಡಿ ಬೀದಿ ಸೇರಿದಂತೆ ಇತರೆ ಸಾರ್ವಜನಿಕರ ಸ್ಥಳಗಳಲ್ಲಿ  ಕಾಂಗ್ರೆಸ್ ಯುವ ಘಟಕದ ಸದಸ್ಯರು ಭೇಟಿ ನೀಡಿ ಸಾರ್ವಜನಿಕರಿಂದ 30 ಸಾವಿರ ರೂಗಳನ್ನು ಹಣ ಸಂಗ್ರಹಿಸಿದರು. 

ಈ ಸಂದರ್ಭ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ದೇಶವಳ್ಳಿ ಡಿ.ಎನ್. ನಟರಾಜು, ಡಿ.ಸಿ.ಸಿ ಸದಸ್ಯದೊಡ್ಡಯ್ಯ, ಪಟ್ಟಣ ಪಂ. ಸದಸ್ಯರಾದ ಜೆ.ಶ್ರೀನಿವಾಸ್, ರವಿ, ಮಲ್ಲಯ್ಯ, ಕಾಂಗ್ರೆಸ್ ಮುಖಂಡರಾದ ರಂಗನಾಥ್, ಮಹೇಶ್, ಕೃಷ್ಣಪುರ ದೇವರಾಜು, ಟಿ.ಎ.ಪಿ.ಸಿ.ಎಂ.ಸಿ ಅಧ್ಯಕ್ಷ ವಡಗೆರೆ ದಾಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆನಂದ್, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು, ರಾಜೇಶ್, ಸಂತೋಷ್, ಮನೋಜ್, ಮನಾವರ್ ಬೇಗ್, ಸೇರಿದಂತೆ ಇತರರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News