ಮೈಸೂರು ಮಹಾನಗರ ಪಾಲಿಕೆ ಚುನಾವಣೆ: 515 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2018-08-21 12:03 GMT

ಮೈಸೂರು,ಆ.21: ಮೈಸೂರು ನಗರ ಪಾಲಿಕೆಯ ಚುನಾವಣೆಗೆ ಅಖಾಡ ಶುರುವಾಗಿದ್ದು, ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಸೋಮವಾರ 65 ವಾರ್ಡ್ ಗಳಿಂದ ಒಟ್ಟು ಸುಮಾರು 473 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ಅಧಿಸೂಚನೆ ಪ್ರಕಟವಾದ ದಿನದಿಂದ ಈವರೆಗೆ 515 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ನಗರ ಪಾಲಿಕೆ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕಿಳಿಯುತ್ತಿದ್ದಾರೆ. ಅದರಲ್ಲಿ ಮಾವಿ ರಾಮ್ ಪ್ರಸಾದ್, ಸ್ನೇಕ್ ಶ್ಯಾಮ್, ಕೆ ವಿ ಶ್ರೀಧರ್ ಹೀಗೆ ಇನ್ನೂ ಅನೇಕರು ಸಾಲು ಸಾಲಾಗಿ ಪಕ್ಷೇತರರಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಆಗಸ್ಟ್ 23 ಕೊನೆಯ ದಿನವಾಗಿದೆ. 

ಆಗಸ್ಟ್ 31 ರಂದು ಪಾಲಿಕೆಯ 65 ವಾರ್ಡ್ ಗಳಿಗೆ ನಡೆಯುವ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗವು ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳನ್ನು ಚುನಾವಣಾ ಸಾಮಾನ್ಯ ವೀಕ್ಷಕರಾಗಿ ನೇಮಕ ಮಾಡಿದೆ. ವಾರ್ಡ್ ನಂ 1 ರಿಂದ 32 ರವರೆಗೆ ಬಿಬಿಎಂಪಿ ಯ ಉಪ ಆಯುಕ್ತರಾದ ಡಾ.ಸೌಜನ್ಯ, ವಾರ್ಡ್ ನಂ 33 ರಿಂದ 65 ರವರೆಗೆ ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ ಪುಷ್ಪಲತಾ ಅವರನ್ನು ಸಾಮಾನ್ಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ವಾರ್ಡ್ ಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆದರೆ ದೂರುಗಳನ್ನು ಪಾಲಿಕೆ ಕಚೇರಿಯಲ್ಲಿರುವ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಹೆಚ್ ಜಗದೀಶ್ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News