ಮಲೆನಾಡು ಭಾಗದಲ್ಲಿ ಮತ್ತೆ ಭೂ ಕುಸಿತ
Update: 2018-08-22 12:15 IST
ಚಿಕ್ಕಮಗಳೂರು,ಆ.2: ಮಲೆನಾಡು ಭಾಗದಲ್ಲಿ ಮತ್ತೆ ಭೂ ಕುಸಿತ ಉಂಟಾಗಿ ನಾಲ್ಕು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕುಸಿತಗೊಂಡು ಸಂಪರ್ಕ ಸ್ಥಗಿತಗೊಂಡಿದೆ.
ಚಿಕ್ಕಮಗಳೂರು ಬೊಗಸೆ -ವಡ್ಡಿ ಗ್ರಾಮದಲ್ಲಿ ಈ ಅವಗಢ ಸಂಭವಿಸಿದ್ದು ರಸ್ತೆ ಕುಸಿತಗೊಂಡು,ರಸ್ತೆಯ ಒಂದು ಬದಿ ಸಂಪೂರ್ಣ ಕುಸಿತವಾಗಿದೆ.
ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.
ವಾಹನ ಸಂಚರಿಸಲಾಗದೆ ಕಾಲುನಡಿಗೆಯಲ್ಲಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಎನ್.ಆರ್.ಪುರ ತಾಲೂಕಿನ ಮೇಲ್ಪಾಲ ಗ್ರಾಮದ ಕಾಫಿ ತೋಟದಲ್ಲಿ ಭೂಕುಸಿತ ಉಂಟಾಗಿದೆ. ಹಳಸೆ ಶಿವಣ್ಣ ಎಂಬುವರಿಗೆ ಸೇರಿದ ಕಾಫಿ ತೋಟ ಇದಾಗಿದೆ.
ಒಂದು ಎಕರೆಗೂ ಅಧಿಕ ಕಾಫಿ,ಮೆಣಸು ಬೆಳೆ ನಾಶವಾಗಿರುವುದಾಗಿ ಅಂದಾಜಿಸಲಾಗಿದೆ.
ಭೂ ಕುಸಿತದಿಂದ ಮಲೆನಾಡಿಗರಲ್ಲಿ ಆತಂಕ ಹೆಚ್ಚಾಗಿದೆ.