ದಾಖಲೆ ಪತ್ರ ಕಳೆದುಕೊಂಡವರಿಗೆ ಸರಕಾರದಿಂದ ಪಡಿತರ ಚೀಟಿ ವಿತರಣೆ
ಬೆಂಗಳೂರು, ಆ.23: ತೀವ್ರ ಮಳೆಗೆ ತತ್ತರಿಸಿ ಹೋಗಿರುವ ಕೊಡಗು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮನೆ ಕಳೆದುಕೊಂಡು ಗುರುತಿನ ಚೀಟಿಯೂ ಸೇರಿದಂತೆ ಸರಕಾರದ ಯಾವುದೇ ದಾಖಲೆ ಪತ್ರ ಇಲ್ಲದವರಿಗೆ ಪಡಿತರ ಚೀಟಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಆಸ್ತಿ-ಪಾಸ್ತಿ ಸೇರಿ ಎಲ್ಲ ರೀತಿಯ ದಾಖಲೆ ಕಳೆದುಕೊಂಡಿರುವವರಿಗೆ ತಕ್ಷಣಕ್ಕೆ ಫೋಟೋ ಸಹಿತ ಪಡಿತರ ಚೀಟಿ ನೀಡಿ ಮುಂದೆ ಇತರೆ ಅಗತ್ಯ ಗುರುತಿನ ಚೀಟಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲು ಸರಕಾರ ನಿರ್ಧರಿಸಿದೆ. ಮನೆ ಬಿಟ್ಟು ನೆಂಟರ ಮನೆಯಲ್ಲಿ ಆಶ್ರಯ ಪಡೆದಿರುವವರು, ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೆ.1 ರಿಂದ ಒಂದು ತಿಂಗಳ ಅಭಿಯಾನ ಕೈಗೊಳ್ಳಲಿದೆ. ನಿರಾಶ್ರಿತರು ಸೇರಿ ಅಗತ್ಯ ಇರುವವರಿಗೆಲ್ಲಾ ಪಡಿತರ ಚೀಟಿ ವಿತರಿಸಿ ಮೂರು-ನಾಲ್ಕು ತಿಂಗಳು ಉಚಿತ ಪಡಿತರ ವಿತರಿಸಲು ಕ್ರಮ ಕೈಗೊಂಡಿದೆ. ಅದಕ್ಕಾಗಿ ಪಡಿತರ ಮಳಿಗೆಗಳನ್ನೂ ಇಲಾಖೆಯಿಂದಲೇ ಸ್ಥಾಪಿಸುವುದು ಸರಕಾರದ ಉದ್ದೇಶವಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಸಚಿವರ ನೇತೃತ್ವದ ತಂಡ ಶನಿವಾರದಿಂದ ನಾಲ್ಕು ದಿನ ಕೊಡಗು ಪ್ರವಾಸ ಬೆಳೆಸಲಿದೆ. ಇಲ್ಲಿನ ಜನರಿಗೆ ಅತ್ಯಂತ ಅಗತ್ಯವಿರುವ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಆಡಳಿತ, ಶಿಕ್ಷಣ ಮತ್ತು ಹಣಕಾಸು ವಿಷಯದಲ್ಲಿ ವಿಶ್ವ ವಿದ್ಯಾಲಯಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಬೇಕು. ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಷಮತೆ ಆಧಾರದ ಮೇಲೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಬೇಕು, ರಾಜ್ಯದ ವಿದ್ಯಾರ್ಥಿಗಳು ಯಾವುದೇ ವಿವಿಯಲ್ಲಿ ಪ್ರವೇಶ ಪಡೆಯುವ ವ್ಯವಸ್ಥೆ ಇರಬೇಕು. ಪ್ರತಿ ವಿವಿ ಶೇ. 50ರಷ್ಟು ಸೀಟುಗಳನ್ನು ತನ್ನ ಭೌಗೋಳಿಕ ವ್ಯಾಪ್ತಿಯ ಹೊರಗಿನ ವಿದ್ಯಾರ್ಥಿಗಳಿಗೆ ಕೊಡಬೇಕು. ಎಲ್ಲ ವಿವಿಗಳಲ್ಲಿ ಶಿಕ್ಷಣ ಸಂಶೋಧನೆಗೆ ಸಂಬಂಧಿಸಿದ ವಿಭಾಗವನ್ನು ಕಡ್ಡಾಯವಾಗಿ ಹೊಂದಿರಬೇಕು. ಉತ್ತಮ ಪ್ರಾಧ್ಯಾಪಕರನ್ನು ಗುರುತಿಸುವ ಕಾರ್ಯ ಆಗಬೇಕು. ಸ್ಮಾರ್ಟ್ ತರಗತಿ, ಡಿಜಿಟಲ್ ಬೋಧನೆ, ಡಿಜಿಟಲ್ ಗ್ರಂಥಾಲಯ ಸೇರಿ ಆಧುನಿಕ ತಂತ್ರಜ್ಞಾನ ಮಾಧ್ಯಮಗಳನ್ನು ಹೆಚ್ಚಾಗಿ ಬಳಸಬೇಕೆಂಬ ಬಗ್ಗೆ ಚರ್ಚಿಸಿದ್ದಾರೆಂದು ಹೇಳಲಾಗಿದೆ.