ಕೇರಳಕ್ಕೆ 7 ಕೋಟಿ ರೂ. ಘೋಷಿಸಿದ ‘ಆ್ಯಪಲ್’

Update: 2018-08-25 09:24 GMT

ವಾಷಿಂಗ್ಟನ್, ಆ.25: ಅಮೆರಿಕದ ಇಲೆಕ್ಟ್ರಾನಿಕ್ ತಂತ್ರಜ್ಞಾನ ಸಂಸ್ಥೆ ‘ಆ್ಯಪಲ್’ ಕೇರಳ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕೆ 7 ಕೋಟಿ ರೂಪಾಯಿ ದೇಣಿಗೆ ನೀಡಲಾಗುವುದು ಎಂದು ಘೋಷಿಸಿದೆ.

ಆ್ಯಪಲ್ ಹೋಂ ಪೇಜ್‍ನಲ್ಲಿ ಕೇರಳವನ್ನು ಬೆಂಬಲಿಸಿ ಬ್ಯಾನರ್‍ಗಳನ್ನು ಹಾಕುವುದಾಗಿ ತಿಳಿಸಿದ್ದು, ಆ್ಯಪ್ ಸ್ಟೋರ್, ಐಟ್ಯೂನ್ಸ್ ಸ್ಟೋರ್‍ಗಳ ಮೂಲಕ “ಕೇರಳಕ್ಕೆ ನೆರವಾಗಲಾಗುವುದು” ಎಂದು ಆ್ಯಪಲ್ ಬಹಿರಂಗಪಡಿಸಿದೆ. ಬಳಕೆದಾರರಿಗೆ ದೇಣಿಗೆ ನೀಡುವ ಅವಕಾಶವನ್ನು ಮಾಡಿಕೊಡುವುದಾಗಿ ಅದು ತಿಳಿಸಿದೆ.

ಜಾಗತಿಕವಾಗಿ ಸಕ್ರಿಯವಾಗಿರುವ ಸರಕಾರೇತರ ಸಂಘಟನೆ ಮರ್ಸಿ ಕಾರ್ಪ್‍ನೊಂದಿಗೆ ಸಹಕರಿಸಿ ಆ್ಯಪಲ್ ಕೇರಳಕ್ಕೆ ಆರ್ಥಿಕ ನೆರವು ಸಂಗ್ರಹಿಸಲಿದ್ದು, ಇದಕ್ಕಾಗಿ  5, 10, 25, 50, 100 200 ಡಾಲರ್ ವರೆಗಿನ ದೇಣಿಗೆ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News