×
Ad

ಹನೂರು: ಕಾಡು ಮೊಲ ಭೇಟೆಯಾಡಿದ ಆರೋಪಿಗಳ ಬಂಧನ

Update: 2018-08-25 22:49 IST

ಹನೂರು,ಆ.25: ಕರ್ನಾಟಕದ ಗಡಿ ಭಾಗದ ಗೋಪಿನಾಥಮ್ ವನ್ಯಜೀವಿ ವಲಯದಲ್ಲಿ ಎನ್‍ಸಿಎಫ್ ತಂಡ ಚಿರತೆ ಅಧ್ಯಯನಕ್ಕಾಗಿ ಅರಣ್ಯ ಪ್ರದೇಶದಲ್ಲಿ ಆಳವಡಿಸಿದ್ದ ಕ್ಯಾಮರಾದಲ್ಲಿ ವ್ಯಕ್ತಿಗಳಿಬ್ಬರು ಎರಡು ಬೇಟೆ ನಾಯಿಗಳ ಜೊತೆ ಕಾಡು ಮೊಲವನ್ನು ಬೇಟೆಯಾಡಿರುವ ದೃಶ್ಯಗಳು ಸೆರೆಯಾಗಿದ್ದು, ಕೂಡಲೇ ಕಾರ್ಯಚರಣೆ ನಡೆಸಿದ ವಲಯ ಅರಣ್ಯಾಧಿಕಾರಿ ಶಂಕರ್‍ ಅಂತರಗಟ್ಟಿ ಆರೋಪಿಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿರುವ ವ್ಯಕ್ತಿಗಳು ಗೋಪಿನಾಥಂ ಗ್ರಾಮದ ಶಂಕರನ್ ಮತ್ತು ಮಾದೇಶ್ ಎಂದು ತಿಳಿದು ಬಂದ ಕೂಡಲೇ ವಲಯ ಅರಣ್ಯಾಧಿಕಾರಿ ಶಂಕರ್‍ ಅಂತರಗಟ್ಟಿ ಮತ್ತು ತಂಡ ಶಂಕರ್ ಮತ್ತು ಮಾದೇಶ್‍ನನ್ನು ಬಂಧಿಸಿ ಮುಂದಿನ ಕ್ರಮಕೈಗೂಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News