ದಾವಣಗೆರೆಯ ಇಬ್ಬರು ಪೊಲೀಸರಿಗೆ ಮುಖ್ಯಮಂತ್ರಿ ಪದಕದ ಗರಿ

Update: 2018-08-26 18:19 GMT
ವೀರಬಸಪ್ಪ, ಆರ್.ಆರ್.ಪಾಟೀಲ್

ದಾವಣಗೆರೆ, ಆ,26: ಜಿಲ್ಲೆಯ ಪೊಲೀಸ್ ಅಧಿಕಾರಿ ಗಳಾದ ಪೂರ್ವ ವಲಯ ಐಜಿಪಿ ಕಚೇರಿಯ ಪೊಲೀಸ್ ನಿರೀಕ್ಷಕ ಆರ್.ಆರ್.ಪಾಟೀಲ್, ಪಿ.ಜೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಸೈ ವೀರಬಸಪ್ಪ ಎಲ್. ಕುಸಲಾಪುರ ಅವರು 2017ನೇ ಸಾಲಿನ ಮುಖ್ಯ ಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಪೂರ್ವ ವಲಯ ಐಜಿಪಿ ಕಚೇರಿಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಆರ್.ಪಾಟೀಲ್, ಬಿ.ಕಾಂ ಪಧವಿದರರಾ ದ್ದು, ಕರ್ನಾಟಕ ಪೊಲೀಸ್ ಇಲಾಖೆಗೆ ಸ್ಪೋರ್ಟ್ಸ್ ಕೊಟಾದಲ್ಲಿ ಪಿಎಸ್ಸೈ ಆಗಿ 2003ರಲ್ಲಿ ನೇಮಕ ಗೊಂಡಿದ್ದರು. ಬಳಿಕ ಕೊಪ್ಪಳ, ಬೀದರ್, ರಾಯಚೂರು ಹಾಗೂ ಹಾವೇರಿ ಜಿಲ್ಲೆಗಳಲ್ಲ್ಲಿ ಕರ್ತವ್ಯ ನಿರ್ವಹಿಸಿ, 2014ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಭಡ್ತಿ ಹೊಂದಿ ನಕ್ಸಲ್ ನಿಗ್ರಹ ಪಡೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ವೃತ್ತದಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿರುರುವ ವೀರಬಸಪ್ಪ ಎಲ್. ಕುಸಲಾಪುರ, ಬಿಎಸ್ಸಿ, ಬಿ.ಎಡ್., ಪಧವಿದರರಾಗಿದ್ದು, ಕರ್ನಾಟಕ ಪೊಲೀಸ್ ಇಲಾಖೆಗೆ ಪಿಎಸ್ಸೈ ಆಗಿ 2010 ರಲ್ಲಿ ನೇಮಕಗೊಂಡಿದ್ದರು. ಚಿಕ್ಕಬಳ್ಳಾಪುರದಲ್ಲಿ ಪ್ರೊಬೇಷನರಿ ಕರ್ತವ್ಯ ಮುಗಿಸಿ, ಬೆಂಗಳೂರಿನ ಹಲಸೂರುಗೇಟ್ ಠಾಣೆ, ದಾವಣಗೆರೆ ಜಿಲ್ಲೆಯ ಸಂಚಾರ ಪೊಲೀಸ್ ಠಾಣೆ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕತರ್ವ್ಯ ನಿರ್ವಹಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News