×
Ad

ಹನೂರು: ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನೆ

Update: 2018-08-27 22:36 IST

ಹನೂರು,ಆ.27: ಆಂಡಿಪಾಳ್ಯ ಗ್ರಾಮದಲ್ಲಿ ಸುಮಾರು 4 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ಚಾಮುಲ್ ಅದ್ಯಕ್ಷ  ಸಿ .ಎನ್ ಗುರುಮಲ್ಲಪ್ಪ ಉದ್ಘಾಟಿಸಿದರು.

ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡುವುದರ ಜೊತೆಗೆ ಸರ್ಕಾರದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆಯುವದರೂಂದಿಗೆ ಆರ್ಥಿಕ ಸಬಲರಾಗಿ ಎಂದು ಕರೆ ನೀಡಿದರು.

ಈ ಸಂದರ್ಭ ಆಂಡಿಪಾಳ್ಯ ಸಂಘದ ಸಂಘದ ಅಧ್ಯಕ್ಷೆ ಮಂಜುಳಾ, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಉಪವ್ಯವಸ್ಥಾಪಕ ಹೆಚ್.ಸಿ ಶರತ್‍ಕುಮಾರ್, ವಿಸ್ತರಣಾಧಿಕಾರಿ ಮಂಜುಳಾ,  ಕಾರ್ಯದರ್ಶಿ ಆಶಾ ಸೇರಿದಂತೆ ನಂಜಶೆಟ್ಟಿ, ದೂರೈ, ರಾಜು ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News