ದಾವಣಗೆರೆ: ಸಿಎಂ ಪರಿಹಾರ ನಿಧಿಗೆ ಹಣ ಸಂದಾಯ
Update: 2018-08-27 23:05 IST
ದಾವಣಗೆರೆ,ಆ.27: ನಗರದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೇಮಣ್ಣ ಎಸ್ ಅವರ ಮಕ್ಕಳಾದ ಹರ್ಷ, ವೈಭವ್ ಸ್ವಯಂ ಪ್ರೇರಣೆಯಿಂದ ನಗರದಲ್ಲಿ ನೇರವಾಗಿ ಜನರಲ್ಲಿ ನೆರೆ ಪೀಡಿತ ಪ್ರದೇಶವಾದ ಕೊಡಗಿನ ಜನತೆಗೆ ಪರಿಹಾರ ನಿಧಿ ಸಂಗ್ರಹಿಸಿದ್ದು, ಒಟ್ಟು 25,400/-ರೂ ಸಂಗ್ರಹವಾಗಿದೆ.
ಸದರಿ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿ, ರಾಷ್ಟ್ರೀಯ ವಿಪತ್ತು ಅಕೌಂಟ್ ನಂಬರ್-37887098605, ಎಸ್.ಬಿ.ಐ., ವಿಧಾನಸೌಧ, ಬೆಂಗಳೂರು ಇವರ ಖಾತೆಗೆ ಡಿಡಿ ಮೂಲಕ ಪಾವತಿಸಲಾಗಿದೆ. ಎಸ್ಪಿ ಚೇತನ್, ಎಎಸ್ಪಿ ಉದೇಶ ಟಿ.ಜೆ. ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿದ್ದಾರೆ.