2 ಮಕ್ಕಳ ಮಿತಿಗೆ ಚೀನಾ ಖೊಕ್?: ನೂತನ ನಾಗರಿಕ ನೀತಿ ಸಂಹಿತೆ ಪರಿಶೀಲನೆಯಲ್ಲಿ

Update: 2018-08-28 17:20 GMT

ಬೀಜಿಂಗ್, ಆ. 28: ಎರಡು ಮಕ್ಕಳ ನೀತಿಯನ್ನು ಚೀನಾ ಕೈಬಿಡಲಿದೆ ಎಂಬ ಸೂಚನೆಯನ್ನು ಸರಕಾರಿ ಒಡೆತನದ ಪತ್ರಿಕೆ ‘ಪ್ರೊಕ್ಯುರೇಟರೇಟ್ ಡೇಲಿ’ ನೀಡಿದೆ.

ದಶಕಗಳಿಂದ ಜಾರಿಯಲ್ಲಿರುವ ವಿವಾದಾಸ್ಪದ ಕುಟುಂಬ ಯೋಜನೆ ನಿಯಮಗಳನ್ನು ರದ್ದುಗೊಳಿಸುವ ಕಾಯ್ದೆಯೊಂದು ರೂಪುಗೊಳ್ಳುತ್ತಿದೆ ಎಂದು ಅದು ಹೇಳಿದೆ.

ಎರಡು ಮಕ್ಕಳ ನೀತಿಯನ್ನು ಚೀನಾದಲ್ಲಿ ಹಲವು ದಶಕಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ದಂಡ ವಿಧಿಸುವ ಮೂಲಕ ಈ ನೀತಿಯನ್ನು ಜಾರಿಗೊಳಿಸಲಾಗುತ್ತಿತ್ತು. ಹಲವು ಪ್ರಕರಣಗಳಲ್ಲಿ ಬಲವಂತದ ಗರ್ಭಪಾತ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗಳನ್ನೂ ನಡೆಸಲಾಗಿದೆ.

ನೂತನ ಕಾಯ್ದೆಯಲ್ಲಿ ‘ಕುಟುಂಬ ಯೋಜನೆ’ ಎನ್ನುವ ಯಾವುದೇ ಪ್ರಸ್ತಾಪವಿರುವುದಿಲ್ಲ. ಈಗಿನ ಕಾನೂನಿನ ಪ್ರಕಾರ, ಚೀನಾದಲ್ಲಿ ದಂಪತಿಗಳು ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಹಾಗಿಲ್ಲ.

ನೂತನ ನಾಗರಿಕ ಸಂಹಿತೆಯ ಬಗ್ಗೆ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯೊಂದು ಈ ವಾರ ಚರ್ಚೆ ನಡೆಸುತ್ತಿದೆ. ನೂತನ ಸಂಹಿತೆಯು 2020ರಲ್ಲಿ ಪೂರ್ಣಗೊಳ್ಳುವುದು.

 ‘ಒಂದೇ ಮಗು’ ನೀತಿಯಿಂದ...

ಜನಸಂಖ್ಯಾ ಬೆಳವಣಿಗೆಯನ್ನು ನಿಧಾನಿಸುವುದಕ್ಕಾಗಿ ಚೀನಾದಲ್ಲಿ 1979ರಲ್ಲಿ ‘ಒಂದೇ ಮಗು’ ನೀತಿಯನ್ನು ಜಾರಿಗೊಳಿಸಲಾಗಿತ್ತು.

ದೇಶವು ವೃದ್ಧರ ನಾಡಾಗುತ್ತಿರುವುದನ್ನು ಮನಗಂಡ ಚೀನಾ 2016ರಲ್ಲಿ ಈ ಮಿತಿಯನ್ನು ಇಬ್ಬರು ಮಕ್ಕಳಿಗೆ ಏರಿಸಿತ್ತು.

ನೂತನ ನಾಗರಿಕ ಸಂಹಿತೆಯು ಮಿತಿಯನ್ನು ಇನ್ನಷ್ಟು ಏರಿಸುವುದೇ ಅಥವಾ ಅನಿಯಮಿತ ಸಂಖ್ಯೆಯ ಮಕ್ಕಳನ್ನು ಹೊಂದಲು ದಂಪತಿಗಳಿಗೆ ಅವಕಾಶ ನೀಡುವುದೇ ಎನ್ನುವುದನ್ನು ವರದಿ ತಿಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News