ಮಡಿಕೇರಿ: ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2018-08-29 14:10 GMT

ಮಡಿಕೇರಿ,ಆ.29: ಮಹಾಮಳೆಯಿಂದ ಕುಸಿದ ಗುಡ್ಡದ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಕಾಟಗೇರಿ ಗ್ರಾಮದ ವ್ಯಕ್ತಿಯೊಬ್ಬರ ಮೃತದೇಹವನ್ನು ರಕ್ಷಣಾ ಪಡೆ ಸಾಹಸಿಕ ಕಾರ್ಯಾಚರಣೆಯ ಮೂಲಕ ಬುಧವಾರ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ.

ಕಾಟಗೇರಿ ನಿವಾಸಿ ಗಿಲ್ಬರ್ಟ್ ಮೆಂಡೋನ್ಸ(59) ಅವರ ಮೃತದೇಹವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಗರುಡ ತಂಡ, ಕುಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಶ್ವಾನದಳ ತಂಡಗಳು ಸಂಘಟಿತ ಪ್ರಯತ್ನದ ಮೂಲಕ, ಕೆಸರು ಮಯವಾಗಿದ್ದ ಪ್ರದೇಶದಲ್ಲಿ ಪತ್ತೆ ಹಚ್ಚಿ ಹೊರ ತೆಗೆದಿವೆ.

ಗಿಲ್ಬರ್ಟ್ ಮೆಂಡೋನ್ಸ ಅವರ ಮೃತದೇಹ ಪತ್ತೆಯಾಗುವುದರೊಂದಿಗೆ ಪ್ರಾಕೃತಿಕ ವಿಕೋಪದಿಂದ ಸಾವನ್ನಪ್ಪಿದವರ ಸಂಖ್ಯೆ 16ಕ್ಕೇರಿದೆ. ಮಹಾಮಳೆಯ ಸಂದರ್ಭ ನಾಪತ್ತೆಯಾಗಿರುವ ಹೆಬ್ಬಾಲೆ ಗ್ರಾಮದ ಹರೀಶ್ ಕುಮಾರ್(42), ಜೋಡುಪಾಲದ ಮಂಜುಳಾ(15) ಅವರ ಪತ್ತೆಕಾರ್ಯ ಮಾತ್ರ ಬಾಕಿ ಉಳಿದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News