ತುಮಕೂರು: ಮಸ್ಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ; ಜೆಡಿಎಸ್ ಜಯಭೇರಿ

Update: 2018-08-29 16:39 GMT

ತುಮಕೂರು,ಆ.29: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಮಸ್ಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 12ಕ್ಕೆ 12ಸ್ಥಾನಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿ ಹೀನಾಯ ಸೋಲು ಕಂಡಿದೆ.

ಅವಧಿ ಪೂರ್ಣಗೊಂಡ ಹಿನ್ನಲೆ ಮಸ್ಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ಘೋಷಣೆಯಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಶಾಸಕ ಡಿ.ಸಿ.ಗೌರೀಶಂಕರ್ ಮಾರ್ಗದರ್ಶನದಲ್ಲಿ ಜೆಡಿಎಸ್ ಮುಖಂಡ ಕೆಂಪಹನುಮಯ್ಯ ಅವರ ಸಿಂಡಿಕೇಟ್‍ನಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಜಯ ಕಂಡಿದ್ದಾರೆ. ಮಸ್ಕಲ್ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಾಮಾನ್ಯ ವರ್ಗಕ್ಕೆ ಜೆಡಿಎಸ್ ಪಕ್ಷದಿಂದ ಐದು, ಬಿಜೆಪಿ ಪಕ್ಷದಿಂದ ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಪಕ್ಷದ ಐದೂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಪರಾಜಿತರಾಗಿದ್ಡಾರೆ.

ಎರಡು ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದು, ಜೆಡಿಎಸ್ ನಿಂದ ಇಬ್ಬರು, ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಲ್ಲಿಯೂ ಜೆಡಿಎಸ್ ಪಕ್ಷ ಗೆಲುವು ಕಂಡಿದೆ. ಹಿಂದುಳಿದ ವರ್ಗ ಎ .ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರೆ, ಸಾಲಗಾರರಲ್ಲದ ಕ್ಷೇತ್ರಕ್ಕೆ ಬಿಜೆಪಿ,ಜೆಡಿಎಸ್ ಸ್ವತಂತ್ರ ಅಭ್ಯರ್ಥಿ ಕಣಕ್ಕಿಳಿದಿದ್ದು, ಜೆಡಿಎಸ್ ಅಭ್ಯರ್ಥಿ 168 ಮತ ಪಡೆದು ವಿಜೇತರಾಗಿದ್ದಾರೆ.

ಮಸ್ಕಲ್ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು 1179 ಮತದಾರರಿದ್ದು 1054 ಮತ ಚಲಾವಣೆಯಾಗಿದ್ದವು. ಜೆಡಿಎಸ್ ಅಭ್ಯರ್ಥಿಗಳಾದ ಕೆಂಪಹನುಮಯ್ಯ(752) ಗುರುಪ್ರಸಾದ್(614) ಚನ್ನಮಾರೇಗೌಡ(649) ನಾಗರತ್ನಮ್ಮ(618) ಎಂ.ಎನ್ ಪ್ರಕಾಶ್ (293) ಎಂ.ಮಂಜುನಾಥ್(577) ಲಕ್ಷ್ಮೀಪತಿ(235) ಸದಾಶಿವಯ್ಯ(203) ಹನುಮಂತಯ್ಯ(174) ಮತ ಪಡೆದು ಜಯಶಾಲಿಗಳಾಗಿದ್ದು, ಉಳಿದ ಮೂರು ಅಭ್ಯರ್ಥಿಗಳು ಅವಿರೋಧ ಅಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News