ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ದತೆ: ಆಯುಕ್ತ ಜಗದೀಶ್

Update: 2018-08-29 16:45 GMT

ಮೈಸೂರು,ಆ.29: ಮೈಸೂರು ಮಹಾನಗರ ಪಾಲಿಕೆಗೆ ಇದೇ ಆ.31 ರ ಶುಕ್ರವಾರ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ತಿಳಿಸಿದರು.

ಪಾಲಿಕೆ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ಎಲ್ಲಾ ರೀತಿಯ ಸಕಲ ಸಿದ್ದತೆ ಕೈಗೊಂಡಿದ್ದು, ಒಟ್ಟು 65 ವಾರ್ಡ್‍ಗಳಲ್ಲಿ 7,92,107 ಮತದಾರರಿದ್ದು, 3,96,896 ಪುರುಷರು, 4,01,211 ಮಹಿಳಾ ಮತದಾರರು ಇದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ 725 ಮತಗಟ್ಟೆಗಳಿದ್ದು, 90 ಆಕ್ಸಲೆರಿ ಮತಗಟ್ಟೆಗಳು ಸೇರಿ 815 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 65 ಸ್ಥಾನಗಳಿಗೆ ಒಟ್ಟು 396 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಾರಾಣಿ ಕಾಲೇಜು, ಪಡುವಾರಹಳ್ಳಿಯಲ್ಲಿರುವ ಮಹರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ಮಹರಾಜ ಕಾಲೇಜು, ಟಿರಿಷಿಯನ್ ಕಾಲೇಜು ಸೇರಿದಂತೆ ನಾಲ್ಕು ಕಡೆ ಮಸ್ಟರಿಂಗ್ ನಡೆಯಲಿದ್ದು, ಸೆ.3 ರಂದು ಪಡುವಾರಹಳ್ಳಿಯಲ್ಲಿರುವ ಮಹರಾಣಿ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಸಿ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News