ಸುಂಟಿಕೊಪ್ಪ: ಪುರ್ನವಸತಿ ಕೇಂದ್ರದಲ್ಲಿದ್ದ 138 ಜನರ ಸ್ಥಳಾಂತರ

Update: 2018-08-29 17:13 GMT

ಸುಂಟಿಕೊಪ್ಪ,ಆ.29: ಅತೀವೃಷ್ಠಿ, ಗುಡ್ಡ ಕುಸಿತದಿಂದ ಪುರ್ನವಸತಿ ಕೇಂದ್ರದಲ್ಲಿದ್ದ 46 ಕುಟುಂಬದ 138 ಸಂತ್ರಸ್ತರನ್ನು ಕುಶಾಲನಗರಕ್ಕೆ ಬುಧವಾರ ವಿವಿಧ ವಾಹನಗಳಲ್ಲಿ ಸ್ಥಳಾಂತರಿಸಲಾಯಿತು.

ಆ.16 ರಂದು ಮುಂಜಾನೆ 2 ಗಂಟೆಯ ವೇಳೆಗೆ ಮಹಾ ಮಳೆ ಹಾಗೂ ಜಲಪ್ರಳಯದಿಂದ ಅತೀವೃಷ್ಠಿ ದುರಂತ ಸಂಭವಿಸಿದೆ. ಅಂದಿನಿಂದ ಇಂದಿನವರೆಗೂ ನೂರಾರು ಮಂದಿ ಇಲ್ಲಿನ ಹಲವು ಕಡೆಗಳಲ್ಲಿ ಆಶ್ರಯ ಪಡೆದಿದ್ದರು. ಪಟ್ಟಣದಲ್ಲಿ ವಿವಿಧ ಸ್ಥಳಗಳಾದ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂಥ ಅಂತೋಣಿ ಹಿರಿಯ ಪ್ರಾಥಮಿಕಶಾಲೆ, ಖತೀಜ ಉಮ್ಮ ಮದರಸಗಳಲ್ಲಿ ಪುರ್ನವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಊಟ, ವಸತಿ ಕಲ್ಪಿಸಿದ್ದರು. ಶಾಲೆಗಳು ಆರಂಭಗೊಳ್ಳುತ್ತಿದ್ದಂತೆ ಶಾಲೆಗಳಲ್ಲಿದ್ದ ಸಂತ್ರಸ್ತರಿಗೆ ಸರಕಾರಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿತ್ತು. ಇದುವರೆಗೂ ಇಲ್ಲಿನ ಜವಾಬ್ದಾರಿಯನ್ನು ರಾಮಮಂದಿರದಲ್ಲಿ ಸೇವಾಭಾರತಿ ವಹಿಸಿಕೊಂಡಿತ್ತು. ಇನ್ನು ಮುಂದೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. 

ಇದೇ ಸಂದರ್ಭ ಸಂತ್ರಸ್ತರಿಗೆ ಅಕ್ಕಿ ಸೇರಿದಂತೆ ವಿವಿಧ ಸಾಮಾಗ್ರಿಗಳ ಕಿಟ್‍ನ್ನು ಸೇವಾ ಭಾರತಿ ವತಿಯಿಂದ ವಿತರಿಸಲಾಯಿತು. ಸ್ಥಳಾಂತರದ ಸಂದರ್ಭ ತಾಲೂಕು ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕರಾದ ಶಿವಪ್ಪ, ಗ್ರಾಮಲೆಕ್ಕಿಗರು, ಪೊಲೀಸ್ ಸಿಬ್ಬಂದಿಗಳು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News