ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಂಡ ಪವರ್ ಬ್ಯಾಂಕ್

Update: 2018-08-30 08:30 GMT

ಹೊಸದಿಲ್ಲಿ, ಆ.30: ಬ್ಯಾಗ್ ಒಳಗಿದ್ದ ಪವರ್ ಬ್ಯಾಂಕನ್ನು ಹೊರತೆಗೆಯುವಂತೆ ಸೂಚಿಸಿದ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ 55 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪವರ್ ಬ್ಯಾಂಕ್ ತೆಗೆಯುವಂತೆ ಸಿಬ್ಬಂದಿ ಹೇಳಿದಾಗ ಮಹಿಳೆ ಕೋಪದಿಂದ ಪವರ್ ಬ್ಯಾಂಕನ್ನು ನೆಲಕ್ಕೆಸಿದಿದ್ದಾರೆ. ಪರಿಣಾಮ ಅದು ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. ಕೂಡಲೇ ಆಕೆಯನ್ನು ಬಂಧಿಸಲಾಗಿದ್ದು, ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News