ಶುಕ್ರವಾರ ಸ್ಥಳೀಯ ಸಂಸ್ಥೆಗಳಿಗೆ ಮತದಾನ

Update: 2018-08-30 14:48 GMT

ಬೆಂಗಳೂರು, ಆ.30: ರಾಜ್ಯದ 29 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯತ್ ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಮತದಾನ ನಡೆಯಲಿದ್ದು, ಸೆ.3 ರಂದು ಮತ ಎಣಿಕೆ ನಡೆಯಲಿದೆ.

2,067 ನಗರಸಭೆಗಳಿಗೆ, 1,422 ಪುರಸಭೆಗಳಿಗೆ ಹಾಗೂ 408 ಪಪಂಗೆ ಸೇರಿ 3,897 ಮತಗಟ್ಟೆಗಳನ್ನು ರಚಿಸಲಾಗಿದ್ದು, ಚುನಾವಣೆಯ ಮತದಾನಕ್ಕೂ ಮೊದಲು ಇವಿಎಂ ಬಳಕೆ ಪರಿಶೀಲಿಸಿದ್ದು, ನೋಟಾ ಸೌಲಭ್ಯ ಒದಗಿಸಲಾಗಿದೆ. ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಅಳವಡಿಸಲಾಗಿರುತ್ತದೆ.

ಬುಧವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಮೂರು ಪಕ್ಷಗಳ ಮುಖಂಡರು, ಶಾಸಕರು ತಮ್ಮ ಸ್ವಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ.

ಡಿಸೆಂಬರ್‌ನಲ್ಲಿ ಎರಡನೇ ಹಂತ: ಬಾಕಿ ಉಳಿದ 120ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಲೊಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಅಭ್ಯರ್ಥಿಗಳ ಪರ ವಿವಿಧ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News