ಹಾಸನ: ಸ್ಥಳೀಯ ಸಂಸ್ಥೆಗಳ ಚುನಾವಣೆ; ಶಾಂತಿಯುತ ಮತದಾನ

Update: 2018-08-31 14:45 GMT

ಹಾಸನ,ಆ.31: ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಎರಡು ನಗರಸಭೆ, ಮೂರು ಪುರಸಭೆಗೆ ಚುನಾವಣೆಯಲ್ಲಿ ಹೆಸರು ಬದಲಾವಣೆ ಮತ್ತು ಪಟ್ಟಿಯಲ್ಲಿ ಹೆಸರು ಬಿಟ್ಟಿ ಹೋಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಅಹಿತಕರ ಘಟನೆ ಸಂಭವಿಸದೆ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಿತು. 

486 ಅಭ್ಯರ್ಥಿಗಳು ಸ್ಪರ್ಧೆವೊಡ್ಡಿದ್ದು, 274 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಸುಮಾರು 2,15,812 ಲಕ್ಷಕ್ಕೂ ಅಧಿಕ ಮತದಾರರು ಮತದಾನದ ಹಕ್ಕು ಹೊಂದಿದ್ದು, ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಸೆಪ್ಟಂಬರ್ 3ರ ರಂದು ಬೆಳಿಗ್ಗೆ ಮತ ಏಣಿಕೆ ಪ್ರಾರಂಭವಾಗಿ, ಮದ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ಪೂರ್ಣ ಹೊರ ಬೀಳಲಿದೆ.

ಹೊಳೆನರಸೀಪುರದಲ್ಲಿ ಪಟ್ಟಣದ ಚನ್ನಾಂಬಿಕ ಕಲ್ಯಾಣಮಂಟಪದಲ್ಲಿ ಹಾಸನದ ಕಾರ್ತಿಕ್ ಹಾಗೂ ಹೊಳೆನರಸೀಪುರದ ಪೂಜಾ ಎಂಬವರು ವಿವಾಹವಾಗಿದ್ದು, ನಂತರ ಕಲ್ಯಾಣ ಮಂಟಪದಿಂದ ಹೊರ ಬಂದು ಮತ ಚಲಾಯಿಸಿದ್ದಾರೆ. ಸಕಲೇಶಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೋರ್ವರು ಮತಗಟ್ಟೆಗೆ ಬಂದು ಮತಚಲಾಯಿಸಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಇವರು 1ನೇ ವಾರ್ಡಿನಲ್ಲಿ ಮತದಾನ ಮಾಡಿದರು. 

ಮತಗಟ್ಟೆಗೆ ಬರುವ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕೊನೆಯ ಕಸರತ್ತನ್ನು ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಮೂರು ಪಕ್ಷದ ಅಭ್ಯರ್ಥಿಗಳ ಜೊತೆಗೆ ಸ್ವತಂತ್ರ್ಯ ಅಭ್ಯರ್ಥಿಗಳ ಪ್ರಚಾರ ಜೋರಾಗಿಯೇ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News