×
Ad

ಸಕಲೇಶಪುರ ಪುರಸಭೆ ಚುನಾವಣೆ: ಶೇಕಡ 77.64 ರಷ್ಟು ಮತದಾನ

Update: 2018-08-31 23:46 IST

ಸಕಲೇಶಪುರ,ಆ.31: ಪುರಸಭೆ ಚುನಾವಣೆಯಲ್ಲಿ ಶೇಕಡ 77.64 ರಷ್ಟು ಮತದಾನ ನಡೆದಿದ್ದು, ವಾರ್ಡ್ ನಂಬರ್ 7ರ ಮತಗಟ್ಟೆ ಸಮೀಪ ಲಾಠಿಚಾರ್ಜ್ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ವಾರ್ಡ್ ನಂಬರ್ 18 ರಲ್ಲಿ ಶೇ 90.01 ರಷ್ಟು ಗರಿಷ್ಟ ಮತದಾನ ನಡೆದರೆ, ವಾರ್ಡ್ ನಂಬರ್ 8 ರಲ್ಲಿ ಶೇ.65 ರಷ್ಟು ಕನಿಷ್ಟ ಮತದಾನ ನಡೆದಿದೆ.
ವಾರ್ಡ್ ನಂಬರ್ 7ರಲ್ಲಿ ವಾಹನ ವ್ಯಕ್ತಿಯೊಬ್ಬರಿಗೆ ತಾಗಿದ ಘಟನೆಗೆ ಸಂಬಂದಿಸಿದಂತೆ ಪರಿಸ್ಥಿತಿ ಹದಗೆಟ್ಟಾಗ ಪೋಲಿಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. 

ಮಳೆಯ ನಡುವೆ ಮಂದಗತಿಯಲ್ಲಿ ಆರಂಭವಾದ ಮತದಾನ ಮದ್ಯಾಹ್ನದ ವೇಳೆಗೆ ಬಿರುಸಿನಿಂದ ಸಾಗಿತು. ಪಟ್ಟಣದ 9 ಹಾಗೂ 18 ನೇ ವಾರ್ಡ್ ಮತಗಟ್ಟೆಯಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News