ಚಿಕ್ಕಮಗಳೂರು: ಮಾನವ ಹಕ್ಕುಗಳ ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿ ಮನವಿ

Update: 2018-08-31 18:27 GMT

ಚಿಕ್ಕಮಗಳೂರು, ಆ.31: ಮಾನವ ಹಕ್ಕುಗಳ ಹೋರಾಟಗಾರರಾದ ಬಂಧನವನ್ನು ಖಂಡಿಸಿ ಹಾಗೂ ಅವರ ಬಿಡುಗಡೆ ಮಾಡುವಂತೆ ದಲಿತ ಪ್ರಗತಿಪರ ಸಂಘಟನೆ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮನವಿ ನೀಡಿದ ಬಳಿಕ ವಕೀಲ ಕೆ.ಯು.ಹೂವಪ್ಪ ಮಾತನಾಡಿ, ಪ್ರಧಾನಿ ಮೋದಿ ಹತ್ಯೆಗೆ ಸಂಚು ಮತ್ತು ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ದಲಿತ ಕವಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರರಾದ ಆನಂದ್ ತೇಲ್ ತುಂಬೆ ಮತ್ತು ತೆಲುಗಿನ ಕ್ರಾಂತಿಕಾರಿ ಕವಿ, ವರವರ ರಾವ್ ಮತ್ತು ಇನ್ನೂ ಹಲವು ಮಾನವ ಹಕ್ಕುಗಳ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಸಂವಿಧಾನ ವಿರೋಧಿ, ಜನ ವಿರೋಧಿ ನೀತಿಯನ್ನು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಅವರ ಬಿಡುಗಡೆಗೆ ರಾಷ್ಟ್ರಪತಿಯವರು ಮದ್ಯ ಪ್ರವೇಶಿಸಬೇಕೆಂದು ಒತ್ತಾಯಿಸುತ್ತದೆ ಎಂದರು.

ಈ ಸಂದರ್ಭ ಅಂಗಡಿ ಚಂದ್ರು, ಇಂದಾವರ ನಾಗೇಶ್, ಡಿ.ಎಸ್.ಎಸ್.ಮಂಜು, ಕೋಮು ಸೌವಾರ್ಧ ವೇಧಿಕೆಯ ಪುಟ್ಟಸ್ವಾಮಿ ನವೀನ್, ಮಾಗಡಿ ವಿರೂಪಾಕ್ಷ, ಆನಂದ್ ರಾಜ್, ಲೋಕೇಶ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News