×
Ad

ಕೊಡಗು ಸಂತ್ರಸ್ತ ವಿದ್ಯಾರ್ಥಿಗಳ ನೆರವಿಗೆ ಬಂದ ಎಂಎಸ್‍ಐಎಲ್: 4.50 ಲಕ್ಷ ಮೌಲ್ಯದ ನೋಟ್ ಪುಸ್ತಕ ವಿತರಣೆ

Update: 2018-09-01 18:57 IST

ಮಡಿಕೇರಿ ಸೆ.1 : ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಮೈಸೂರು ವಿಭಾಗದ ವತಿಯಿಂದ ಕೊಡಗು ಮಳೆಹಾನಿ ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಲಾಯಿತು.

ಸುಮಾರು 4.50 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಸಂಸ್ಥೆಯ ಪ್ರಮುಖರು ಮಡಿಕೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಮೈಸೂರು ಉಪ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಎನ್.ಕೃಷ್ಣ, ಕೊಡಗು ಜಿಲ್ಲಾ ಸಂಪರ್ಕ ಅಧಿಕಾರಿ ಕೆಂಪಯ್ಯ, ಮಡಿಕೇರಿ ಮಳಿಗೆಯ ಉಸ್ತುವಾರಿ ನವೀನ್ ಕುಮಾರ್ ಹಾಗೂ ಚೇರಂಬಾಣೆ ಮಳಿಗೆಯ ಉಸ್ತುವಾರಿ ಮೋಹನ್ ಕುಮಾರ್ ಈ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News