×
Ad

ಯುವ ಜನರಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿರುವುದು ಆಶಾದಾಯಕ: ಶಾಸಕ ಸುರೇಶ್

Update: 2018-09-01 20:20 IST

ತರೀಕೆರೆ, ಸೆ.1: ತಾಲೂಕಿನ ರಂಗೇನಹಳ್ಳಿಯಲ್ಲಿ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಡಿ.ಎಸ್. ಸುರೇಶ್ ಶನಿವಾರ ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸರಕಾರಗಳು ಪ್ರತಿಯೊಂದು ಕ್ರೀಡೆಗಳಿಗೆ ಆದ್ಯತೆ ನೀಡುತ್ತಾ ಬಂದಿದೆ. ಯುವ ಸಮುದಾಯ ಇತ್ತೀಚಿನ ದಿವಸಗಳಲ್ಲಿ ಕ್ರೀಡಾಶಕ್ತಿಯೊಂದಿಗೆ ತಮ್ಮ ಸಾಮರ್ಥ್ಯ ತೊರ್ಪಡಿಸದೆ ಕ್ರೀಡಾಮನೋಭಾವನೆಯಿಂದ ದೂರ ಇರುವುದನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು. 

ಇಂದು ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾವು ಭಾಗವಹಿಸಿ ಮುಂದೆ ನಡೆಯುವ ಇಂತಹ ಕಾರಣಗಳಿಂದ ದೂರವಿರದೇ ಸದಾ ಕ್ರೀಯಾಶೀಲಾರಾಗಿ ಕ್ರೀಡಾಮಟ್ಟದಲ್ಲಿ ಭಾಗವಹಿಸುವುದು ಅವಶ್ಯಕ. ಇಂದು ವಿಶ್ವಮಟ್ಟದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾ ಪಟುಗಳು ಚಿನ್ನದ ಪದಕ ಪಡೆಯುವಲ್ಲಿ ವಿಫಲವಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ವಿಷಾಧಿಸಿದರು.

ಇತ್ತೀಚಿನ ದಿನಗಳಲ್ಲಿ ಕ್ರೀಡೆಯು ಭಾರತದಲ್ಲಿ ಅಲ್ಪಮಟ್ಟದ ಸಾಧನೆಗೆ ಮುನ್ನುಡಿ ಕಾಣುತ್ತಿರುವುದು ಆಶಾದಾಯಕ. ಈ ಬಾರಿಯ ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಚಿನ್ನದ ಪದಕಗಳೂ ಸೇರಿ ಸರಿಸುಮಾರು 51 ಪದಕಗಳನ್ನು ದೇಶ ಪಡೆದುಕೊಂಡಿರುವುದು ದೇಶದ ಕ್ರೀಡಾಸಕ್ತಿಗೆ ಯುವಕರು ಮುಂದಾಗಿರುವುದು ಸಾಕ್ಷಿ. ರಂಗೇನಹಳ್ಳಿಯಲ್ಲಿ ನಡೆಯುತ್ತಿರುವ 8 ಶಾಲೆಗಳ ವ್ಯಾಪ್ತಿಯ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಸ್ಪರ್ಧಿಗಳು ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮುಂದಿನ ಬಾರಿಯ ಪ್ರಯತ್ನದಲ್ಲಿ ದೇಶವನ್ನು ಪ್ರತಿನಿಧಿಸುವ ಪ್ರಯತ್ನದಲ್ಲಿ ಸಾಗಿ ಕ್ರೀಡಾ ಮನೋಭಾವನೆ ಎಲ್ಲರಲ್ಲೂ ಬೆಳೆಯುವಂತೆ ಅಭಿಲಾಷೆ ಹೊಂದಿ ಮುಂದೆ ಸಾಗಬೇಕೆಂದರು. ಇನ್ನು ತೀರ್ಪುಗರರು ಪ್ರಾಮಾಣಿಕ ಮತ್ತು ಉತ್ತಮ ಸ್ಪರ್ಧಿಗೆ ನ್ಯಾಯೋಚಿತ ಅವಕಾಶ ಕಲ್ಪಿಸಿಕೊಡುವುದರ ಮೂಲಕ ಯಾರಲ್ಲೂ ಭೇದ ಬಾರದ ರೀತಿಯಲ್ಲಿ ಅವರ ಪ್ರಯತ್ನಕ್ಕೆ ಮುಂದಾಗಿ ತೀರ್ಪು ನೀಡಿ ಎಂದರು.  

ಜಿಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಚೈತ್ರಶ್ರೀ, ತಾಲೂಕು ಪಂ. ಅಧ್ಯಕ್ಷೆ ಪದ್ಮಾವತಿ, ಶಾಲಾ ಸಮಿತಿ ಅಧ್ಯಕ್ಷ ಶ್ರೀ ಧನಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ಶೋಭ, ಗ್ರಾಪಂ ಉಪಾಧ್ಯಕ್ಷೆ ಸುವರ್ಣಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳು ದೈಹಿಕಶಿಕ್ಷಕ ಚಂದ್ರಪ್ಪ,  ಗ್ರಾಪಂ ಸದಸ್ಯರುಗಳು ಹಾಜರಿದ್ದು, ಮುಖ್ಯ ಶಿಕ್ಷಕ ರಾಮಾನಾಯ್ಕ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News