ಹಾಸನ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉದ್ಘಾಟನೆ
Update: 2018-09-01 21:54 IST
ಹಾಸನ,ಸೆ.01: ಕೇಂದ್ರ ಸರಕಾರದ ಹೊಸ ಯೋಜನೆಯಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉದ್ಘಾಟನೆಯಲ್ಲಿ ಪ್ರಥಮ ಕ್ಯುಆರ್ ಕಾರ್ಡ್‍ನ್ನು ಜಿಲ್ಲಾ ಅಗ್ರಗಣ್ಯ ಸಣ್ಣ ಉಳಿತಾಯ ಪ್ರತಿನಿಧಿ ಎನ್.ಆರ್. ಕುಮಾರಸ್ವಾಮಿ ಅವರಿಗೆ ಅಂಚೆ ಇಲಾಖೆ ಅಧೀಕ್ಷಕ ಬದರಿನಾಥ್ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಪಿ.ವಿ. ವಿನಯ್ ಕುಮಾರ್ ವಿತರಿಸಿದರು.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸರಕಾರದ ಹೊಸ ಯೋಜನೆಯಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಯನ್ನು ಜಿಲ್ಲಾಧಿಕಾರಿಗಳು ರೋಹಿಣಿ ಸಿಂಧೂರಿ ಉದ್ಘಾಟಿಸಿದರು. ಇದೇ ವೇಳೆ ಅಂಚೆ ಸಹಾಯಕ ಅಧೀಕ್ಷಕಿ ಕೆ.ಎ. ರೇಖಾ, ಸಹಾಯಕ ಅಧೀಕ್ಷಕ ಶ್ರೀಕಂಠಯ್ಯ, ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ರವಿಕುಮಾರ್ ಇದ್ದರು.