×
Ad

ಅಮಿತ್‌ಗೆ ಸ್ವರ್ಣ ಸಂಭ್ರಮ, ಬ್ರಿಡ್ಜ್ ಸ್ಪರ್ಧೆಗೆ ಒಲಿದ ಬಂಗಾರ

Update: 2018-09-01 23:13 IST

ಏಶ್ಯನ್ ಗೇಮ್ಸ್‌ನ 14ನೇ ದಿನವಾದ ಶನಿವಾರ ಭಾರತ ಎರಡು ಚಿನ್ನದ ಪದಕ ಬೇಟೆಯಾಡಿತು. ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಹಸನ್‌ಬಾಯ್ ಅವರನ್ನು ಕೆಡವಿದ ಹರ್ಯಾಣದ ಯೋಧ ಅಮಿತ್ ಪಾಂಗಾಲ್ ಚಿನ್ನಕ್ಕೆ ಮುತ್ತಿಟ್ಟರು. ಬ್ರಿಡ್ಜ್ ಸ್ಪರ್ಧೆಯ(ಕಾರ್ಡ್ ಗೇಮ್) ಪುರುಷರ ಟೀಮ್ ಇವೆಂಟ್‌ನಲ್ಲಿ ಭಾರತ ತಂಡದ ಹಿರಿಯ ಸದಸ್ಯರಾದ ಪ್ರಣಬ್ ಬರ್ಧನ್ ಹಾಗೂ ಶಿಭ್‌ನಾಥ್ ಸರ್ಕಾರ್ ಚೀನಾ ಎದುರಾಳಿಯನ್ನು ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ ಸ್ಕ್ವಾಷ್ ತಂಡ ಫೈನಲ್‌ನಲ್ಲಿ ಎಡವಿ ಸತತ 2ನೇ ಬಾರಿ ಬೆಳ್ಳಿ ಗೆದ್ದುಕೊಂಡಿತು. ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು ಸೋಲಿಸಿ ಕಂಚು ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor