ವಿಚಾರವಾದಿಗಳಿಗೆ ಕಾಂಗ್ರೆಸ್ ಬೆಂಬಲ: ಜಗದೀಶ್ ಶೆಟ್ಟರ್

Update: 2018-09-02 08:59 GMT

ದಾವಣಗೆರೆ, ಸೆ. 2: ಕಾಂಗ್ರೆಸ್ ವಿಚಾರವಾದಿಗಳಿಗೆ ಸಪೋರ್ಟ್ ಮಾಡುತ್ತಿದ್ದು, ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಆರೋಪಿಸಿದರು.

ಸಾಕ್ಷ್ಯಧಾರಗಳ ಮೇಲೆ ವಿಚಾರವಾದಿಗಳನ್ನು ಬಂಧಿಸಿದ್ದಾರೆ. ಆದ್ದರಿಂದ ಸೋ ಕಾಲ್ಡ್ ವಿಚಾರವಾದಿಗಳು ಪ್ರತಿಭಟನೆ ಮಾಡುತ್ತಿದ್ದು, ಕಾಂಗ್ರೆಸ್ ಅವರಿಗೆ ಸಪೋರ್ಟ್ ಮಾಡುತ್ತಾ ಅವರೊಂದಿಗೆ ಶಾಮೀಲಾಗಿದ್ದಾರೆ. ಕಾಂಗ್ರೆಸ್ ಪೊಲೀಸರಿಗೆ ಫ್ರೀಡಂ ಕೊಡಬೇಕು‌ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಈಗಲೂ ಸಹ ಪರಸ್ಪರ ಮುಖ ನೋಡಿಕೊಳ್ಳುವುದಿಲ್ಲ, ಸಮ್ಮಿಶ್ರ ಸರಕಾರದಲ್ಲಿ ಹೊಂದಾಣಿಕೆ ಹಾಗೂ ಸಮನ್ವಯತೆ ಇಲ್ಲ, ಇದರಲ್ಲಿ ಒಳ ಜಗಳ ಜಾಸ್ತಿ, 100 ದಿನಗಳ ಸಂಭ್ರಮಾಚರಣೆಯನ್ನು ಸರ್ಕಾರದಿಂದ ಆಚರಣೆ ಮಾಡಿಲ್ಲ. ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗಿದೆ ಎಂದು ಶೆಟ್ಟರ್ ಹೇಳಿದರು.

ಮುಖ್ಯಮಂತ್ರಿ ಗಳು ಋಣ ಮುಕ್ತ ಕಾಯ್ದೆ ಜಾರಿ ಮಾಡಲು ಹೊರಟ್ಟಿದ್ದರು. ಅದರ ಪ್ರತಿಯನ್ನು ಮೊದಲು ಹೊರಡಿಸಲಿ, ಕ್ಯಾಬಿನೆಟ್ ವಿಸ್ತೀರ್ಣದ ನಂತರ ಸರ್ಕಾರ ಪತನವಾಗಲಿದ್ದು, ಯಾವುದೇ ಕ್ಷಣದಲ್ಲಾದರೂ ಸರ್ಕಾರ ಬೀಳಲಿದೆ ಎಂದು ಶೆಟ್ಟರ್ ಹೇಳಿದರು.

ಡಿಕೆಶಿ ಹಾಗೂ ಪರಮೇಶ್ವರ್ ಜೆಡಿಎಸ್ ವಕ್ತಾರರಾಗಿ ಮಾತನಾಡುತ್ತಿದ್ದಾರೆ. ಪರಮೇಶ್ವರ್ ಗೆ ಸಿದ್ದರಾಮಯ್ಯ ಮಿನಿಸ್ಟರ್ ಪೋಸ್ಟ್ ನೀಡಲು ಹಿಂದೇಟು ಹಾಕಿದ್ದರು. ಆದರೆ ಕುಮಾರಸ್ವಾಮಿ ಮಿನಿಸ್ಟರ್ ಪೋಸ್ಟ್ ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು

ನಂತರ ಝಮೀರ್ ಅಹಮ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಶೆಟ್ಟರ್, ಕಾಂಗ್ರೆಸ್  ಓಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡೇ ಬಂದಿದೆ. ಅಲ್ಪಸಂಖ್ಯಾತರ ಓಟ್ ಪಡೆಯಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News