×
Ad

'ದಸರಾ ಮಹೋತ್ಸವ -2018' ಗಜಪಯಣ ಚಾಲನೆ

Update: 2018-09-02 15:14 IST

ಮೈಸೂರು, ಸೆ. 2: ದಸರಾ ಮಹೋತ್ಸವ -2018ರ ವಿದ್ಯುಕ್ತ ಆರಂಭವಾದ ಗಜಪಯಣ ಕಾರ್ಯಕ್ರಮಕ್ಕೆ ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಲ್ಲಿ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಸಮ್ಮುಖದಲ್ಲಿ ಹಾಡಿಯ ನಿವಾಸಿಗಳಾದ ಪುಟ್ಟಯ್ಯ ಹಾಗೂ ತಾಯಮ್ಮ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್, ಶಾಸಕರಾದ ಅಡಗೂರು ಹೆಚ್. ವಿಶ್ವನಾಥ್, ಕೆ.ಟಿ. ಶ್ರೀಕಂಠೇಗೌಡ, ಮಹದೇವ, ಅಶ್ವಿನ್ ಕುಮಾರ್, ಡಾ. ಹರ್ಷವರ್ಧನ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಯಿಮಾ ಸುಲ್ತಾನ ನಝೀರ್ ಅಹಮ್ಮದ್, ಐ.ಜಿ.ಪಿ. ಶರತ್ ಚಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News