ಆಟೋ ರಿಕ್ಷಾ ಪಲ್ಟಿ: ಇಬ್ಬರು ಸ್ಥಳದಲ್ಲೇ ಮೃತ್ಯು

Update: 2018-09-02 13:37 GMT

ಹರಪನಹಳ್ಳಿ,ಸೆ.2: ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ರಾಮಘಟ್ಟ ಗ್ರಾಮದ ಬಳಿ ನಡೆದಿದೆ. 

ಕೂಲಿಕಾರರಾದ ಪ್ರೇಮ(35) ಜಯ್ಯಮ್ಮ(50) ಮೃತಪಟ್ಟವರು. ಅರಸೀಕೆರೆ ಗ್ರಾಮದಲ್ಲಿ ಸೀಡ್ಸ್ ಕೂಲಿ ಕೆಲಸಕ್ಕೆಂದು 6 ಜನರು ಆಗಮಿಸಿದ್ದು, ಮರಳಿ ತುಪ್ಪದಹಳ್ಳಿ ಗ್ರಾಮಕ್ಕೆ ತೆರಳುವಾಗ ಅವಘಡ ಸಂಭವಿಸಿದೆ. ಅತೀ ವೇಗವಾಗಿ ಆಟೋ ಚಾಲನೆ ಮಾಡಿದ್ದು, ಚಾಲಕನ ಅಜಾಗರೂಕತೆಯಿಂದ ಆಟೋ ಪಲ್ಟಿಯಾಗಿದೆ ಎನ್ನಲಾಗಿದೆ.

ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News