ಹನೂರು: ಮುಸುಕಿನ ಜೋಳಕ್ಕೆ ಸೈನಿಕ ಹುಳದ ಭಾದೆ; ಅಧಿಕಾರಿಗಳಿಂದ ಪರಿಶೀಲನೆ

Update: 2018-09-02 17:16 GMT

ಹನೂರು,ಸೆ.2: ಲೊಕ್ಕನಹಳ್ಳಿ ಜಿಲ್ಲಾ ಪಂ. ವ್ಯಾಪ್ತಿಯ ರೈತರು ಬೆಳೆದಿದ್ದ ಮುಸುಕಿನ ಜೋಳದ ಬೆಳೆಗೆ ಸೈನಿಕ ಹುಳುವಿನ ಭಾದೆ ಹೆಚ್ಚಾಗಿದ್ದರಿಂದ ಹರದನಳ್ಳಿಯ ಕೃಷಿ ಕೇಂದ್ರದ ವಿಜ್ಞಾನಿ ಪಂಪನ್‍ ಗೌಡ ತಂಡ, ತಾಲೂಕು ಕೃಷಿ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.

ವಿವಿಧ ಗ್ರಾಮಗಳಲ್ಲಿ ಸುಮಾರು 2500 ಎಕ್ಟೆರ್ ಗಿಂತ ಹೆಚ್ಚಿನ ಜಮೀನುಗಳಲ್ಲಿ ರೈತರು ಮುಸುಕಿನ ಜೋಳವನ್ನು ಬಿತ್ತನೆ ಮಾಡಿ, ಕೆಲವೇ ದಿನಗಳಲ್ಲಿ ಗಿಡ ನಿರ್ದಿಷ್ಟ ಮಟ್ಟಕ್ಕೆ ಪೈರು ಬೆಳದು ನಿಂತಿತ್ತು. ಆದರೆ ಬೆಳೆಯು ಸೈನಿಕ ಹುಳುವಿನ ಕಾಟದಿಂದ ಹಾನಿಯಾಗುತ್ತಿದ್ದು, ಕೃಷಿ ವಿಜ್ಞಾನಿಗಳ ತಂಡ ಹಾಗೂ ಅಧಿಕಾರಿಗಳು ಹುತ್ತೂರು, ಟಿಬೇಟಿಯನ್‍ ಕ್ಯಾಂಪ್, ಬೈಲೂರು ಇನ್ನಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಹುಳುವಿನ ಹತೋಟಿಗೆ ಹರದನಹಳ್ಳಿ ಕೃಷಿ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದರು.

ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೃಷಿ ಹಾಗೂ ಗ್ರಾಮದಲ್ಲಿ ಬೆಳಯುವ ಬೆಳೆಗಳ ಬಗ್ಗೆ ಯಾವ ಸಮಯಕ್ಕೆ ಯಾವ ಔಷದಿಯನ್ನು ಸಿಂಪಡಿಸಿಬೇಕು ಮತ್ತು ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಸಿಗುವ ಬಿತ್ತನೆ ಬೀಜಗಳ ಬಗ್ಗೆ ಅರಿವು ಹಾಗೂ ಸೈನಿಕ ಹುಳುವಿನ ರೋಗದ ನಿವಾರಣೆಯ ಜೊತೆಗೆ ಇದರ ಹತೋಟಿಗೆ ಅನುಸರಿಸಬೇಕಾದ ಮುಂಜಾಗ್ರತೆಯ ಕ್ರಮಗಳ ಕುರಿತು ತುರ್ತಾಗಿ ಪ್ರತಿ ರೈತರಿಗೆ ತಿಳಿಸಲು ಸೂಚಿಸಿದರು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News