ಕೆಎಎಸ್ ಅಧಿಕಾರಿ ಡಾ.ಲೋಕೇಶ್‍ಗೆ ಉಪ ರಾಷ್ಟ್ರಪತಿಗಳಿಂದ ಚಿನ್ನದ ಪದಕ

Update: 2018-09-02 17:19 GMT

ಶಿವಮೊಗ್ಗ, ಸೆ. 2: ಇತ್ತೀಚೆಗೆ ಬೀದರ್ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಜರುಗಿದ 10 ನೇ ಘಟಿಕೋತ್ಸವ ಸಮಾರಂಭದಲ್ಲಿ ಶಿವಮೊಗ್ಗದ ನಿವಾಸಿ, ಕೆಎಎಸ್ ಅಧಿಕಾರಿ ಡಾ. ಎಲ್.ವಿ.ಲೋಕೇಶ್‍ರವರು ತಾವು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡುರವರಿಂದ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗುವ ಜೊತೆಗೆ, ಪಿಹೆಚ್‍ಡಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ. 

'ಪಶು ವೈದ್ಯಕೀಯ ಔಷಧ ಶಾಸ್ತ್ರ ಮತ್ತು ವಿಷ ಶಾಸ್ತ್ರ' ವಿಭಾಗದಲ್ಲಿ 'ಹಾಲು, ಮೊಟ್ಟೆ ಮತ್ತು ಕೋಳಿ ಮಾಂಸದಲ್ಲಿರುವ ಕೀಟನಾಶಕಗಳ ಶೇಷ ಮಾದರಿಯನ್ನು ಪತ್ತೆ ಹಚ್ಚುವ ಮಾದರಿ'ಯನ್ನು ಕಂಡುಹಿಡಿಯುವ ಪ್ರೌಢ ಪ್ರಬಂಧ ಮಂಡಿಸಿದ್ದರು. ಈ ಪ್ರಬಂಧಕ್ಕೆ ಚಿನ್ನದ ಪದಕ ಗೌರವ ಲಭ್ಯವಾಗಿತ್ತು. 

ಹಿನ್ನೆಲೆ: ಡಾ. ಎಲ್. ವಿ. ಲೋಕೇಶ್‍ರವರು ಶಿವಮೊಗ್ಗದ ಕಾಶೀಪುರ ಬಡಾವಣೆಯ ನಿವಾಸಿಯಾಗಿದ್ದಾರೆ. ವೆಂಕಟಪ್ಪ, ರತ್ನಮ್ಮ ದಂಪತಿಯ ಪುತ್ರರಾಗಿದ್ದಾರೆ. ಈ ಹಿಂದೆ ಶಿವಮೊಗ್ಗ ಪಶುವೈದ್ಯಕೀಯ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ ಕೆಎಎಸ್ ಸೇವೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ಬೆಂಗಳೂರಿನ ವಾಣಿಜ್ಯ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News