ತುಮಕೂರು ಮಹಾನಗರ ಪಾಲಿಕೆ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ

Update: 2018-09-02 17:28 GMT

ತುಮಕೂರು,ಸೆ.2: ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ ಗಳಿಗೆ ಆಗಸ್ಟ್ 31 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 7:30 ಗಂಟೆಗೆ ಆರಂಭವಾಗಲಿದೆ. 35 ವಾರ್ಡುಗಳ ಮತ ಎಣಿಕೆಗೆ ಪ್ರತಿ ವಾರ್ಡಿಗೆ ಒಂದು ಟೇಬಲ್ ನಂತೆ 35 ಟೇಬಲ್ ಸಿದ್ದಗೊಳಿಸಲಾಗಿದೆ.

ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ನಂತರ ಭದ್ರತಾ ಕೊಠಡಿಯಲ್ಲಿರುವ ಮತಪೆಟ್ಟಿಗೆಗಳ ಮತ ಎಣಿಕೆ ನಡೆಯಲಿದೆ. ಮದ್ಯಾಹ್ನ 12 ರ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಮತ ಎಣಿಕೆ ನಂತರ ಗೆದ್ದ ಅಭ್ಯರ್ಥಿಗಳು ಮೆರವಣಿಗೆ, ವಿಜಯೋತ್ಸವ ಆಚರಿಸುವುದನ್ನು ಜಿಲ್ಲಾ ಚುನಾವಣಾಧಿಕಾರಿಗಳು ನಿಷೇಧಿಸಿದ್ದಾರೆ .

35 ವಾರ್ಡುಗಳ ಮತ ಎಣಿಕೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೊದಲ ಮಹಡಿಯ ಮೂರು ಕೊಠಡಿಗಳಲ್ಲಿ ನಡೆಯಲಿದೆ. 1-15ವಾರ್ಡುಗಳ ಮತ ಎಣಿಕೆ ಮೊದಲ ಕೊಠಡಿಯಲ್ಲಿ, 16-25ರವರೆಗಿನ ಮತ ಎಣಿಕೆ 2ನೇ ಕೊಠಡಿಯಲ್ಲಿ, 26-35ನೇ ವಾರ್ಡುಗಳ ಮತ ಎಣಿಕೆ 3ನೇ ಕೊಠಡಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News