ಶ್ರೀ ಕೃಷ್ಣನ ವ್ಯಕಿತ್ವ ಎಲ್ಲಾ ಕಾಲದಲ್ಲೂ ಪ್ರಸ್ತುತ: ಸಿ.ಟಿ.ರವಿ

Update: 2018-09-02 18:19 GMT

ಚಿಕ್ಕಮಗಳೂರು,ಸೆ.02: ಪ್ರಾಚೀನ ಕಾಲದಿಂದ ಹಿಡಿದು ಪ್ರಸ್ತುತ ಇಂದಿನ ಕಾಲದಲ್ಲಿಯೂ ಶ್ರೀ ಕೃಷ್ಣನ ವ್ಯಕ್ತಿತ್ವ ಅನನ್ಯವಾದದ್ದು ಎಂದು ಶಾಸಕ ಸಿ.ಟಿ.ರವಿ ಅವರು ಹೇಳಿದ್ದಾರೆ.

ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ರವಿವಾರ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಸಮಾರಂಭವನ್ನ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರತಿಯೊಬ್ಬರೂ ಇಷ್ಟಪಡುವ ಹಾಗೂ ಎಲ್ಲರಲ್ಲಿಯೂ ಕೃಷ್ಣನ ವ್ಯಕ್ತಿತ್ವವನ್ನು ಹೋಲುವಂತಹ ಗುಣ ಶ್ರೀ ಕೃಷ್ಣನದ್ದು. ಶ್ರೀ ಕೃಷ್ಣ ತನ್ನ ಬಾಯಿಯಲ್ಲೇ ಬ್ರಹ್ಮಾಂಡವನ್ನು ತೋರಿಸಿದ ಮಹಾ ಪುರಷ ಎಂದು ಹೇಳಿದರು.

ಧರ್ಮದಲ್ಲಿ ಬೇಧ ಭಾವಗಳಗಳಿಲ್ಲ. ಒಳ್ಳೆಯ ಸಾತ್ವಿಕ ಗುಣಗಳನ್ನು ಹೊಂದಿದ ಶಕ್ತಿಗಳನ್ನು ಒಗ್ಗೂಡಿಸುವುದೇ ಶ್ರೀ ಕೃಷ್ಣನ ವ್ಯಕ್ತಿತ್ವ. ಈ ರೀತಿಯ ತತ್ವಗಳು ದೈವೀಕತೆಯಲ್ಲಿ ಮಾನವೀಯತೆಯ ಗುಣ ಶ್ರೀ ಕೃಷ್ಣನಲ್ಲಿ ಕಾಣಬಹುದು ಹಾಗೂ ಕರ್ತವ್ಯದಿಂದ ವಿಮುಖರಾಗುವ ಪ್ರತಿಯೊಬ್ಬರಿಗೂ ಒಳ್ಳೆಯ ಉಪದೇಶವನ್ನು ಶ್ರೀ ಕೃಷ್ಣನ ವ್ಯಕ್ತಿತ್ವ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು.

ಇಸ್ಕಾನ್‍ನ ಪ್ರಿಯ ಗೋವಿಂದ ದಾಸ್ ಅವರು ಶ್ರೀ ಕೃಷ್ಣನ ಬಗ್ಗೆ ಮಾತನಾಡುತ್ತಾ, ಭಗವದ್ಗೀತೆಯ ಮಹಾಭಾರತದಲ್ಲಿ ಎಲ್ಲಾ ವಿಷಯಗಳನ್ನ ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕಾಗಿದೆ. ಅಲ್ಲದೇ ಪರಿಪೂರ್ಣ ಜ್ಞಾನ ಎಂದರೆ ಅದುವೇ ಭಗವದ್ಗೀತೆ ಎಂದು ವಿವರಿಸಿದ ಅವರು, ಪರಿಪೂರ್ಣ ಜ್ಞಾನವನ್ನು ಪಡೆಯುವುದು ಶ್ರೀ ಕೃಷ್ಣನ ವಿಶೇಷ ವ್ಯಕ್ತಿತ್ವದಿಂದ ನಾವು ತಿಳಿದುಕೊಳ್ಳಬಹುದು ಎಂದರು.

ಸಾಹಿತಿ ಬಿ.ತಿಪ್ಪೇರುದ್ರಪ್ಪ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು. 'ಅಸಾಮನ್ಯನಾಗಿದ್ದರೂ ಸಾಮಾನ್ಯನಾಗಿ ಇದ್ದು ವಿಧೇಯಕನಾಗಿ ತನ್ನ ನಿಜವಾದ ವ್ಯಕ್ತಿತ್ವದಿಂದ ಇಡೀ ಮಹಾ ಭಾರತದ ಪ್ರತಿಯೊಂದು ಪಾತ್ರದಲ್ಲಿ ಶ್ರೀ ಕೃಷ್ಣನನ್ನು ಕಾಣಬಹುದಾಗಿದೆ ಎಂದರು.

ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪಕಾರ್ಯದರ್ಶಿ ರಾಜಗೋಪಾಲ್, ತಹಶೀಲ್ದಾರ್ ನಂದಕುಮಾರ್, ತಾ.ಪಂ.ಸದಸ್ಯ ಸುರೇಶ್, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ನಾಗರಾಜ್, ಜೈನ್ ಸಂಘದ ಅಧ್ಯಕ್ಷ ಗೌತಮ್ ಚಂದ್ ಸಿಯಾಲ್, ಹಳ್ಳಿಕಾರ್ ಸಾಂಘದ ಪದಾಧಿಕಾರಿಗಳು ಮತ್ತಿತರರು ವೇದಿಕೆಯಲ್ಲಿದ್ದರು. 

ಕೃಷ್ಣ ವೇಷಧಾರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News