ದಾವಣಗೆರೆ: ಹೊನ್ನಾಳಿ, ಜಗಳೂರು ಪಟ್ಟಣ ಪಂ.ನಲ್ಲಿ ಬಿಜೆಪಿಗೆ ಬಹುಮತ; ಚನ್ನಗಿರಿ ಪುರಸಭೆ ಅತಂತ್ರ

Update: 2018-09-03 17:13 GMT

ದಾವಣಗೆರೆ,ಸೆ.3: ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಸೋಮವಾರ ನಡೆದಿದ್ದು, ಜಿಲ್ಲೆಯ ಮೂರು ತಾಲೂಕುಗಳಲ್ಲಿ ಎರಡರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಉಳಿದ ಒಂದು ತಾಲೂಕಿನಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ಪ್ರತಿಷ್ಠೆಯ ಕಣವಾಗಿದ್ದ ಹೊನ್ನಾಳಿ ಪಟ್ಟಣ ಪಂ.ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ ಈ ಮೂಲಕ ಕ್ಷೇತ್ರವನ್ನು ತಮ್ಮ ಹಿಡಿತ ಬಲಪಡಿಸಿಕೊಂಡಿದ್ದಾರೆ. ಒಟ್ಟು 18 ವಾರ್ಡ್‍ಗಳಲ್ಲಿ ಬಿಜೆಪಿ 10 ಸ್ಥಾನಗಳಿಸಿದರೆ, ಕಾಂಗ್ರೆಸ್ ಕೇವಲ 5 ಸ್ಥಾನ ಹಾಗೂ ಪಕ್ಷೇತರರು 3 ಸ್ಥಾನ ಗಳಿಸಿದ್ದು, ಬಿಜೆಪಿ ಅಧಿಕಾರ ಗದ್ದುಗೆ ಏರಿದೆ.

ಬಿಜೆಪಿ ಶಾಸಕರಿರುವ ಜಗಳೂರಿನ ಪಟ್ಟಣ ಪಂ.ನಲ್ಲಿ ಬಿಜೆಪಿ 11 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು 17 ವಾರ್ಡ್‍ಗಳಲ್ಲಿ ಬಿಜೆಪಿ 11 ಸ್ಥಾನ, ಕಾಂಗ್ರೆಸ್ 5 ಸ್ಥಾನಕ್ಕೆ ತೃಪ್ತಿಗೊಂಡರೆ ಹಾಗೂ ಜೆಡಿಎಸ್ 2 ಸ್ಥಾನ ಪಡೆವ ಮೂಲಕ ಖಾತೆ ತೆರೆದಿದೆ.

ಅದೇ ರೀತಿ, ಅಡಕೆ ನಾಡು ಚನ್ನಗಿರಿ ಪುರಸಭೆಯಲ್ಲಿ ಬಿಜೆಪಿ ಶಾಸಕರಿದ್ದರೂ ಸ್ಪಷ್ಟ ಬಹುಮತ ಪಡೆಯುವಲ್ಲಿ ಬಿಜೆಪಿ ಎಡವಿದೆ. ಪುರಸಣೆಯ ಒಟ್ಟು  23 ವಾರ್ಡ್‍ಗಳಲ್ಲಿ ಬಿಜೆಪಿ 10 ಸ್ಥಾನ, ಕಾಂಗ್ರೆಸ್ 10 ಸ್ಥಾನ ಪಡೆದಿದ್ದು, ಜೆಡಿಎಸ್ 3 ಸ್ಥಾನ ಪಡೆವ ಮೂಲಕ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಂತೆ ತಾಲೂಕಿನಲ್ಲೂ ಮೈತ್ರಿ ಸಾಧ್ಯತೆ ಹೆಚ್ಚಾಗಿದೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ಮೂರು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News