ತರೀಕೆರೆ: ‘ತಿದ್ದಿ ತೀಡಿದ ಟೀಚರ್ಸ್‌ಗೊಂದು ಸಲಾಂ’ ಕಾರ್ಯಕ್ರಮ

Update: 2018-09-03 18:11 GMT

ತರೀಕೆರೆ, ಸೆ.2: ಪಟ್ಟಣದ ತುಂಗಭದ್ರಾ ಬಿ.ಎಡ್.ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಜನಪರ ಸಂಘಟನೆ ವತಿಯಿಂದ ಗುರುನಮನ ಕಾರ್ಯಕ್ರಮದ ಅಂಗವಾಗಿ ‘ತಿದ್ದಿ ತೀಡಿದ ಟೀಚರ್ಸ್ ಗೊಂದು ಸಲಾಂ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷೆ ಪದ್ಮಾವತಿ, ಶಿಕ್ಷಕರನ್ನು ಅವರ ಸಮ್ಮುಖದಲ್ಲಿ ಶಿಷ್ಯರು ಅವರ ಸೇವೆಯನ್ನು ಸ್ಮರಿಸಿ ಗೌರವಿಸುವ ಕೆಲಸ ಪವಿತ್ರವಾದದ್ದು. ಇಂದು ಜಗತ್ತಿನ ಎಲ್ಲಾ ಕ್ರಾಂತಿ ಹಾಗೂ ಬದಲಾವಣೆಗೆ ಶಿಕ್ಷಕರುಗಳೇ ಕಾರಣರಾಗಿದ್ದಾರೆ. ಶಿಕ್ಷಕರು ತಮ್ಮ ಸೇವೆಯನ್ನು ಕರ್ತವ್ಯ ಎಂದು ಪಾಲಿಸಿದಾಗ ಮಾತ್ರ ಸಮಾಜ ಅವರನ್ನು ನಮಿಸುತ್ತದೆ ಎಂದು ಹೇಳಿದರು.

ಶಾಹೇದಾ ಬಾನು ತಮ್ಮ ಗುರು ಎಂ.ಎಸ್.ಮಂಜುಳಾಗೆ ನಮಿಸುತ್ತಾ, ಉರ್ದು ಭಾಷಿಕ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ ಅವರ ನ್ನು ಬೆಳೆಸಿದ ಬಗ್ಗೆ ಹೇಳಿ ತಾನು ಸಹ ಅವರಿಂದಲೇ ಕನ್ನಡವನ್ನು ಕಲಿತು ಶಿಕ್ಷಕಿಯಾದೆ ಎಂದು ಸ್ಮರಿಸಿಕೊಂಡರು.

ಟಿ.ಎಸ್.ಧರ್ಮರಾಜು ತಮ್ಮ ಗುರುಗಳಾದ ಯೂಸೂಫ್ ನವಾಜ್ ಖಾನ್ ತಮಗೆ ಸಂಘಟಿತರಾಗಿ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟರು. ಇಂದು ತಾನು ಪುರಸಭೆಗೆ ಅಧ್ಯಕ್ಷನಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದು ಅವರ ಪ್ರೇರಣೆಯಾಗಿದೆ ಎಂದು ಹೇಳಿದರು.

ಮಿಲ್ಟ್ರೀ ಶ್ರೀನಿವಾಸ್, ವೀರಭದ್ರಪ್ಪ, ಗೋವರ್ಧನ್, ಗೌರವ ನಮನ ಸ್ವೀಕರಿಸಿದ ಯೂಸೂಪ್ ನವಾಜ್ ಖಾನ್, ಡಿ.ಎನ್.ನಾಗರಾಜ್ ಮಾತನಾಡಿದರು.
ಗುರುಗಳಾದ ಡಿ.ಎಸ್.ಶೇಖರಪ್ಪ, ಟಿ.ಆರ್. ಧ್ರುವಕುಮಾರ್ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಪ್ರಸ್ತಾವಿಕವಾಗಿ ಸಂಘಟನೆಯ ದಾದಾಪೀರ್ ಮಾತನಾಡಿದರು. ಪ್ರಾಚಾರ್ಯ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಟಿ.ಆರ್.ಶ್ರೀಧರ್, ಉಮಾದೇವಿ, ಅನಂತ ನಾಡಿಗ್, ಮಧುಸೂಧನ್, ಸದಾನಂದ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News