ಬಿಎಸ್ಪಿ ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತ: ಸಚಿವ ಎನ್.ಮಹೇಶ್

Update: 2018-09-03 18:23 GMT

ಕೊಳ್ಳೇಗಾಲ,ಸೆ.3: ಈ ಬಾರಿ ಬಿಎಸ್ಪಿ ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.

ಚುನಾವಣೆ ಫಲಿತಾಂಶ ನಂತರ ಪ್ರತಿಕ್ರಿಯಿಸಿ ಮಾತನಾಡಿದ ಇವರು, ನಮ್ಮ ಪಕ್ಷ ಕಳೆದ ಬಾರಿ ಕೇವಲ 3 ಸ್ಥಾನ ಪಡೆದಿತ್ತು, ಈಗ ಮೂರು ಪಟ್ಟು ಜಾಸ್ತಿಯಾಗಿದ್ದು, ಒಟ್ಟು 9 ಸ್ಥಾನ ಗೆದ್ದಿದೆ. ಈಗಾಗಲೇ 3 ಮಂದಿ ಪಕ್ಷೇತರರು ನಮ್ಮ ಪಕ್ಷ ಸೇರಲು ಬಯಸಿದ್ದಾರೆ. ಹೀಗಾಗಿ ನಮ್ಮ ಬಲ 12 ಕ್ಕೆ ಏರಲಿದೆ. ನಮಗೆ ಯಾರು 5 ವರ್ಷ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪುತ್ತಾರೆ, ಅವರ ಜೊತೆ ಮೈತ್ರಿಗೆ ಸಿದ್ದ ಇದ್ದೇವೆ ಎಂದರು.

ಮ್ಯಾಜಿಕ್ ನಂಬರ್ 16 ರ ಪೈಕಿ ಈಗಾಗಲೇ ನನ್ನ ಮತ ಸೇರಿ 13 ಇದೆ. ಇನ್ನು 3 ಮೂರು ಮತದ ಕೊರತೆ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದರೆ ಅವರ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಇಲ್ಲ ಎಂದರೆ 6 ಸ್ಥಾನ ಗಳಿಸಿರುವ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನ ಬೇರೆ ಪಕ್ಷದವರಿಗೆ ಬಿಎಸ್‍ಪಿ ಬಿಟ್ಟುಕೊಡಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News