ಪೆಟ್ರೋಲ್ ಬೆಲೆಯೇರಿಕೆ ‘ಒಳ್ಳೆಯ ಅವಕಾಶ' ಎಂದ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ

Update: 2018-09-04 10:36 GMT

ಹೊಸದಿಲ್ಲಿ, ಸೆ.4: ರೂಪಾಯಿ ಮೌಲ್ಯದ ಕುಸಿತ ಹಾಗೂ ಕಚ್ಛಾ ತೈಲ ಬೆಲೆಯೇರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದೇ ಅಲ್ಲದೆ ಪ್ರತಿ ಲೀಟರ್ ಗೆ ಕ್ರಮವಾಗಿ 16 ಪೈಸೆ ಹಾಗೂ 19 ಪೈಸೆಯಷ್ಟು ಏರಿಕೆ ಕಂಡಿದೆ. ಈ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಇದನ್ನೊಂದು ‘ಒಳ್ಳೆಯ ಅವಕಾಶ' ಎಂದು ಬಣ್ಣಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

“ಇಂಧನ ಬೆಲೆಯೇರಿಕೆಯು ರಾಜ್ಯಗಳಿಗೆ ಸಿಹಿ ಸುದ್ದಿ. ಇದರಿಂದಾಗಿ ಅವು ವ್ಯಾಟ್ ಮುಖಾಂತರ ಹೆಚ್ಚಿನ ಆದಾಯ ಗಳಿಸಬಹುದು. ಕೇಂದ್ರ ಕೂಡ ಅಬಕಾರಿ ಸುಂಕದ ರೂಪದಲ್ಲಿ ಗಳಿಸುವುದು ಆದರೆ ರಾಜ್ಯಗಳಿಗೆ ಕೂಡ ಲಾಭವಿದೆ. ಪೆಟ್ರೋಲ್ ಬೆಲೆಯನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ಇದು ಸಕಾಲ”' ಎಂದೂ ಅವರು ಹೇಳಿದ್ದಾರೆ.

ಮಂಗಳವಾರ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ 86.72 ಆಗಿದ್ದರೆ, ಡೀಸೆಲ್ ಬೆಲೆ ರೂ 75.74ರಲ್ಲಿಯೇ ಇತ್ತು. ಹೊಸದಿಲ್ಲಿಯಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ ಕ್ರಮವಾಗಿ ರೂ 79.31 ಹಾಗೂ ರೂ 71.34 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 17 ಪೈಸೆಯಷ್ಟು ಏರಿಕೆಯಾಗಿ ರೂ 82.41ಗೆ ತಲುಪಿದೆ.

ಕಳೆದ ಐದು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ ಕ್ರಮವಾಗಿ ರೂ 4.66 ಹಾಗೂ ರೂ 6.35ರಷ್ಟು ಏರಿಕೆ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News