ದಾವಣಗೆರೆ: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; 21 ಶಿಕ್ಷಕರು ಆಯ್ಕೆ

Update: 2018-09-04 16:32 GMT

ದಾವಣಗೆರೆ,ಸೆ.4 : 2018-19 ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಈ ಬಾರಿ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರಾಥಮಿಕ ಶಾಲಾ ವಿಭಾಗದಿಂದ ಸೇರಿದಂತೆ ಒಟ್ಟು 21 ಶಿಕ್ಷಕರು ಭಾಜನರಾಗಿದ್ದಾರೆ ಎಂದು ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ಮಾಹಿತಿ ನೀಡಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಚನ್ನಗಿರಿ ತಾಲೂಕಿನ ನೀತಿಗೆರೆ ಶಾಲೆಯ ಶಿಕ್ಷಕ ಟಿ ಆರ್ ಶ್ರೀನಿವಾಸ್, ಕಂಸಾಗರದ ದೇವಲಾನಾಯ್ಕ್, ದಾವಣಗೆರೆ ಉತ್ತರ ವಲಯ ವ್ಯಾಪ್ತಿಯ ಹಳೇ ಕಡ್ಲೇಬಾಳ್ ಶಾಲೆಯ ಐ.ಕೆ ಜ್ಯೋತಿ, ಕಾಡಜ್ಜಿಯ ಎ.ಡಿ ರೇವಣಸಿದ್ದಪ್ಪ, ದಾವಣಗೆರೆ ದಕ್ಷಿಣ ವ್ಯಾಪ್ತಿಯ ತುರ್ಚಘಟ್ಟ ಶಾಲೆಯ ಕೆ.ವಿ ಇಂದಿರಾ, ಶ್ರೀರಾಮನಗರದ ಎಂ.ಎ ಧನ್ನೂರು, ಹರಪನಹಳ್ಳಿ ತಾಲೂಕಿನ ಬೆಂಡಿಗೆರೆ ಸಣ್ಣ ತಾಂಡ ಶಾಲೆಯ ರುಕ್ಷ್ಮಿಣಿ ಬಾಯಿ, ತೋಗರಿಕಟ್ಟೆಯ ಕೆ ಗಂಗಾಧರ, ಹರಿಹರ ತಾಲೂಕಿನ ಗುತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಎಸ್.ಸಿದ್ದಮ್ಮ, ಕೆ ಬೇವಿನಹಳ್ಳಿಯ ಎಸ್.ರೂಪ, ಹೊನ್ನಾಳಿ ತಾಲೂಕಿನ ನರಸಗೊಂಡನಹಳ್ಳಿಯ ಶಿಕ್ಷಕ ಸಿಪ್ಪೇಸ್ವಾಮಿ, ಕೆಂಚಿಕೊಪ್ಪದ ಬಿ.ಸೋಮಶೇಖರ, ಜಗಳೂರು ತಾಲೂಕಿನ ಸಾಲಗಟ್ಟಿ ಶಾಲೆಯ ಸಹ ಶಿಕ್ಷಕ ಹೆಚ್. ಕೆಂಚಪ್ಪ, ಬಿಸ್ತುವಳ್ಳಿಯ ಡಿ.ಓಬಕ್ಕ, ಹಿರಿಯ ಪ್ರಾಥಮಿಕಶಾಲಾ ವಿಭಾಗದಿಂದ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ: ಪ್ರೌಢಶಾಲಾ ವಿಭಾಗದಿಂದ ಚನ್ನಗಿರಿ ತಾಲೂಕಿನ ಮಣ್ಣಮ್ಮ ಪ್ರೌಢಶಾಲೆಯ ದೈಹಿಕ ಶಿಕ್ಷಕ ಬಿ.ಬಿ ಮಹೇಶ್ವರಪ್ಪ ಕೆರೆಬಿಳಚಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸಹಶಿಕ್ಷಕ ಸುಹೇಬ್ ಬೇಗ್, ದಾವಣಗೆರೆ ದಕ್ಷಿಣ ವಲಯದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರ ಶಾಂತಯ್ಯ ಪರಡಿಮಠ, ಹರಪನಹಳ್ಳಿಯ ಸರ್ಕಾರಿ ಪದವಿ ಪೂರ್ವಕಾಲೇಜಿನ ಚಿತ್ರಕಲಾ ಶಿಕ್ಷಕರಾದ ವಿಜಯ ಗುಳೇದಗುಡ್ಡ, ಹರಿಹರ ತಾಲೂಕಿನ ಗುರುತಿಪ್ಪೇಸ್ವಾಮಿ ಪ್ರೌಢಶಾಲೆಯ ಸಹ ಶಿಕ್ಷಕ ಬಿ ಟಿ ರೇವಣ್ಣ ನಾಯಕ, ಹೊನ್ನಾಳಿ ತಾಲೂಕಿನ ಗೋಪಗೊಂಡನಹಳ್ಳಿಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ ಸಿ ಮಂಜಪ್ಪ, ಜಗಳೂರು ತಾಲೂಕಿನ ಸರ್ಕಾರಿ ಪದವಿ ಪೂರ್ವ  ಕಾಲೇಜಿನ ಸಹ ಶಿಕ್ಷಕ ಎಸ್ ಸಿ ಮಂಜುನಾಥ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನಾಳೆ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ
ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜರುಗಲಿದೆ.
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಆರ್.ಶ್ರೀನಿವಾಸ್(ವಾಸು) ನೆರವೇರಿಸುವರು. ಶಾಸಕ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಭಾವಚಿತ್ರ ಅನಾವರಣ ಮಾಡುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ನರೆವೇರಿಸುವರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News