ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಗೆದ್ದ ಮಹಿಳೆಯ ಪತಿಗೆ ಹಾಲಿನ ಅಭಿಷೇಕ

Update: 2018-09-04 17:00 GMT

ಮೈಸೂರು,ಸೆ.4: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆದ್ದ ಕಾರಣದಿಂದ ಗಂಡನಿಗೆ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ ವಿಜಯೋತ್ಸವ ಆಚರಿಸಿದ್ದಾರೆ.

ಈ ಘಟನೆ ನಗರದ ಯರಗನಹಳ್ಳಿಯ ವಾರ್ಡ್ ಕೃಷ್ಣನ ದೇವಸ್ಥಾನದ ಬಳಿ ನಡೆದಿದೆ. ಸೋಮವಾರವಷ್ಟೇ ಪಾಲಿಕೆ ಚುನಾವಣೆ ಪ್ರಕಟಗೊಂಡಿದ್ದು, ನಗರದ ವಾರ್ಡ್ ನಂಬರ್ 36ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀರಾಂಪುರ ಜಿಲ್ಲಾ ಪಂಚಾಯತ್ ಸದಸ್ಯ ಮಾದೇಗೌಡ ಅವರ ಪತ್ನಿ ರುಕ್ಮಿಣಿ ಮಾದೇಗೌಡ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಪಾಲಿಕೆ ಸದಸ್ಯೆ ರಜನಿ ಅಣ್ಣಯ್ಯ ವಿರುದ್ಧ 393 ಮತಗಳಿಂದ ಜಯ ಗಳಿಸಿದ್ದಾರೆ.  

ಗೆದ್ದ ಖುಷಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಪತ್ನಿಯೊಂದಿಗೆ ತೆರಳುತ್ತಿದ್ದ ವೇಳೆ ಬೆಂಬಲಿಗರು ಯರಗನಹಳ್ಳಿಯ ಕೃಷ್ಣ ನಗರದಲ್ಲಿರುವ ಕೃಷ್ಣನ ದೇವಸ್ಥಾನದ ಬಳಿ ಮಾದೇಗೌಡರಿಗೆ ಎರಡು ಬಿಂದಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News