ಬ್ರಹ್ಮಪುತ್ರ ನದಿಯಲ್ಲಿ 40 ಪ್ರಯಾಣಿಕರಿದ್ದ ಬೋಟ್ ಮುಳುಗಡೆ

Update: 2018-09-05 10:27 GMT

ಗುವಾಹಟಿ, ಸೆ.5: ಸುಮಾರು 40 ಮಂದಿ ಪ್ರಯಾಣಿಕರು ಹಾಗು 8 ದ್ವಿಚಕ್ರ ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಬೋಟೊಂದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಿರುವ ಘಟನೆ ಗುವಾಹಟಿಯಲ್ಲಿ ಸಂಭವಿಸಿದೆ.

12 ಪ್ರಯಾಣಿಕರು ಈಜಿ ದಡ ಸೇರಿದ್ದಾರೆ ಎನ್ನಲಾಗಿದ್ದು, ಶಾಲಾ ಮಕ್ಕಳು, ಮಹಿಳೆಯರು ಸೇರಿ ಹಲವರು ಇನ್ನೂ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ 25 ಮಂದಿಯ ರಕ್ಷಣಾ ತಂಡ ದೌಡಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News