ಕೇರಳ, ಕೊಡಗು ಸಂತ್ರಸ್ತರ ನಿಧಿಗೆ ಮಸಾಜಿದ್ ಸಂಸ್ಥೆಯಿಂದ 1 ಕೋಟಿ ರೂ. ನೆರವು: ಎಂ.ಎ ಬಶೀರ್

Update: 2018-09-05 13:02 GMT

ಚಿಕ್ಕಮಗಳೂರು, ಸೆ.5: ನಗರದ ಮುತುವಲ್ಲಿ ಯಾನೆ ಮಸಾಜಿದ್ ಸಂಸ್ಥೆ ವತಿಯಿಂದ ಕೇರಳ ಮತ್ತು ಕೊಡಗಿನ ಮಳೆಹಾನಿ ಸಂತ್ರಸ್ತರಿಗೆ 1ಕೋಟಿ ರೂ. ಧನ ಸಹಾಯ ನೀಡಲಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ.ಎ.ಬಶೀರ್ ತಿಳಿಸಿದರು.

ನಗರದಲ್ಲಿ ಬುದವರಾ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೇರಳ ಮತ್ತು ಕೊಡಗಿನಲ್ಲಿ ಸುರಿದ ಭೀಕರ ಮಳೆಯಿಂದ ಅಪಾರ ಸಾವು ನೋವು ಸಂಭವಿಸಿದೆ. ದಿಲ್ಲಿಯಲ್ಲಿರುವ ಜಮೀಯತ್ ಉಲಮಾದ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಮದನಿ ಇವರ ನೇತೃತ್ವದ 8 ಜನರ ತಂಡ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇರಳ ರಾಜ್ಯದ ಸಂತ್ರಸ್ತರಿಗೆ 1 ಕೋ. ರೂ. ಮತ್ತು ಕೊಡಗು ಸಂತ್ರಸ್ತರ ನಿಧಿಗೆ 19 ಲಕ್ಷ ರೂ. ನೀಡಲಾಗಿದೆ ಎಂದು ಎಂದು ತಿಳಿಸಿದರು.

ಸಮೀಕ್ಷೆ ವೇಳೆ ಕೇರಳ ರಾಜ್ಯದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯವಿರುವ ಆಹಾರ ಸಾಮಾಗ್ರಿಗಳನ್ನು ನೀಡುವುದರೊಂದಿಗೆ ಅವರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಲಾಯಿತು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸಥೆಯ ಉಪಾಧ್ಯಕ್ಷ ಸಿಖಂದರ್ ಖಾನ್, ಕಾರ್ಯದರ್ಶಿ ಆರ್.ಎ.ಸಲೀಂ, ಖಜಾಂಚಿ ಝಮೀರ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News