ದಾವಣಗೆರೆ: ಮರಗಳ ಕಡಿತ ಖಂಡಿಸಿ, ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವರ ಪರಿಹಾರಕ್ಕೆ ಆಗ್ರಹಿಸಿ ಧರಣಿ

Update: 2018-09-05 13:07 GMT

ದಾವಣಗೆರೆ,ಸೆ.5: ಅಭಿವೃದ್ದಿ ಹೆಸರಲ್ಲಿ ಮರಗಳ ಕಡಿತ ಖಂಡಿಸಿ ಹಾಗೂ ಬೀದಿಬದಿಯಲ್ಲಿ ತರಕಾರಿ ವ್ಯಾಪಾರಗಳಿಗೆ ಶಾಶ್ವರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಎಸ್‍ಯುಸಿಐ ಆಶ್ರಯದಲ್ಲಿ ಫುಟ್‍ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. 

ಬುಧವಾರ ಡಿಸಿ ಕಚೇರಿ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯು ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟಿದ್ದು, ಸಮಗ್ರ ಅಭಿವೃದ್ದಿಯ ಹೆಸರಿನಲ್ಲಿ ರಸ್ತೆ ಉನ್ನತೀಕರಣ ಹಾಗೂ ಬೀದಿ ದೀಪಗಳ ಅಳವಡಿಕೆ, ನಗರ  ನೈರ್ಮಲ್ಯೀಕರಣ ಮಾಡಲಾಗುತ್ತಿದೆ. ಇದು ಸ್ವಾಗತಾರ್ಹ. ಆದರೆ ಈ ಅಭಿವೃದ್ದಿಯ ಹೆಸರಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ದೊಡ್ಡ ಮರಗಳ ಮಾರಣಹೋಮ ಮಾಡಲಾಗಿದೆ. ಇದರ ಪ್ರಭಾವದಿಂದಾಗಿ ಪ್ರಸ್ತುತ ದಿನಗಳಲ್ಲಿ ದಾವಣಗೆರೆ ಜಿಲ್ಲೆಯ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿದೆ. ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ಅನುಭವಿಸುತ್ತಿದ್ದೇವೆ. ಇನ್ನೊಂದು ಕಡೆ ದಾವಣಗೆರೆ ನಗರವು ಇಡೀ ರಾಜ್ಯದಲ್ಲಿ ಧೂಳು ಸಮಸ್ಯೆಗೆ 3ನೇ ಸ್ಥಾನ ಪಡೆದಿದೆ. ಆಸ್ಪತ್ರೆಗಳಲ್ಲಿ ಈ ದೂಳಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಅಸ್ತಮಾ ಗಣನೀಯವಾಗಿ ಏರಿಕೆಯಾಗಿರುವ ವರದಿಗಳು ಬಹಿರಂಗವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸ್ಮಾರ್ಟ್ ಸಿಟಿ ನಿಗಮವು ನಗರದ ಮಾರುಕಟ್ಟೆಯ ಕೆಲವು ಪ್ರಮುಖ ಬೀದಿಗಳಾದ ಚೌಕಿಪೇಟೆ, ಎಂ ಜಿ ರಸ್ತೆ, ದೊಡ್ಡಪೇಟೆ ರಸ್ತೆಯಲ್ಲಿ ಕಾಮಗಾರಿಯನ್ನು 8 ತಿಂಗಳ ಹಿಂದಿನಿಂದ ಪ್ರಾರಂಭ ಮಾಡಿದ್ದಾರೆ. ಆದರೆ ಇಂದಿಗೂ ಸಂಪೂರ್ಣ ಮುಗಿದಿಲ್ಲ.ಈ ಅಪೂರ್ಣ ಕಾಮಗಾರಿಯಿಂದಾಗಿ ಅಲ್ಲಿನ ವ್ಯಾಪಾರಸ್ಥರು ವಾಹನ ಸವಾರರು ಪಾದಚಾರಿಗಳು ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದರೆ. ಇಲ್ಲಿನ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಹಾಗೂ ಅವರ ಕುಟುಂಬದ ಜೀವನ ಆಧಾರವೇ ಈ ವ್ಯಾಪಾರವಾಗಿದೆ ಹಾಗಾಗಿ ಈ ರಸ್ತೆಯಲ್ಲಿ ಮರಗಳನ್ನು ಕಡಿಯದೆ ಇರುವುದರಲ್ಲೇ ಅಭಿವೃದ್ದಿಗೊಳಿಸಿ ಅವರಿಗೆ ಜೀವನಕ್ಕೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

ವ್ಯಾಪಾರಸ್ಥರು ಕಳೆದ 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು, ಮಹಾನಗರ ಪಾಲಿಕೆಯು ಈ ವ್ಯಾಪಾರಸ್ಥರಿಗೆ ಅಧಿಕೃತ ಪರವಾನಗಿ ಹಾಗೂ ಗುರುತಿನ ಚೀಟಿಯನ್ನು ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News