ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2018-09-05 17:35 GMT

ಹನೂರು,ಸೆ.5: ತಾಲೂಕಿನ ಜಿ.ಆರ್ ನಗರ ಮತ್ತು ಚಿಗತಾಪುರ ಗ್ರಾಮದ ಹಾಲು ಉತ್ಪಾಧಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯ ಪ್ರಾರಂಭದಲ್ಲಿ ವಿಸ್ತರಣಾಧಿಕಾರಿ ವೆಂಕಟೇಶ್ 2017-18 ರ ಆದಾಯ ಖರ್ಚನ್ನು ಮಂಡಿಸಿ ಮಾತನಾಡುತ್ತಾ, ಚಿಗತಾಪುರ ಹಾಲು ಉತ್ಫಾಧಕರ ಸಂಘವು ಕಳೆದ ಸಾಲಿನಲ್ಲಿ ಕೇವಲ 98,844 ರೂ ನಿವ್ವಳ ಲಾಭಗಳಿಸಿದ್ದು, ಅದೇ ರೀತಿ ಜಿ.ಆರ್ ನಗರ ಹಾಲು ಉತ್ಪಾಧಕರ ಸಹಕಾರ ಸಂಘ 2017-18 ರ ಸಾಲಿನಲ್ಲಿ 3 ಲಕ್ಷದ 9 ಸಾವಿರ ರುಗಳನ್ನು ನಿವ್ವಳ ಲಾಭ ಗಳಿಸಿದೆ ಎಂದರು.

ನಂತರ ಚಾಮುಲ್ ಅದ್ಯಕ್ಷ ಸಿ.ಎನ್ ಗುರುಮಲ್ಲಪ್ಪ ಮಾತನಾಡಿ, ಸಹಕಾರ ಸಂಘಗಳು ಸದಾ ರೈತರ ಶ್ರೇಯೋಬಿವೃದ್ದಿಗೆ ಸದಾ ಶ್ರಮಿಸುತ್ತಿದ್ದು, ರೈತರು ಗುಣ ಮಟ್ಟದ ಹಾಲು ಪೂರೈಸುವುದರ ಮುಖಾಂತರ ಸಹಕಾರ ಸಂಘಗಳು ಲಾಭದಾಯವಾಗಿರುವಂತೆ ನೋಡಿಕೊಳ್ಳಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲು ಖರೀದಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಟೆಟ್ರಾ ಪ್ಯಾಕೆಟ್ ಗಳಲ್ಲಿ ಹಾಲು ಮಾರಾಟ ಮಾಡಲು ಕುದೇರಿನಲ್ಲಿ ಯಂತ್ರೋಪಕರಣಗಳನ್ನು ಜೋಡಿಸಲಾಗುತ್ತಿದೆ, ಈಗ ಕೇವಲ 30 ಸಾವಿರ ಲೀಟರ್ ಮಾತ್ರ ಮಾರಾಟವಾಗುತ್ತಿದೆ ಎಂದು ತಿಳಿಸಿದರು. ಸದ್ಯಕ್ಕೆ 2 ರಿಂದ 2.5 ಲಕ್ಷ ಲೀಟರ್ ಹಾಲಿನ ಪುಡಿ ಮಾಡಿಸಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ಹಸುಗಳಿಗೆ ತಪ್ಪದೇ ಜೀವ ವಿಮೆ ಮಾಡಿಸಿ ಹಾಗು ರೈತರಿಗಾಗಿ ರೈತ ಕಲ್ಯಾಣ ಟ್ರಸ್ಟ್ ನಡಿ 1 ಲಕ್ಷದ ವರೆಗೆ ಜೀವ ವಿಮೆ ಸೌಲಭ್ಯವಿದ್ದು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭ ಚಾಮುಲ್ ನ ನಿರ್ದೇಶಕ ನಂಜುಂಡಸ್ವಾಮಿ, ವಿಸ್ತರಣಾಧಿಕಾರಿ ವೆಂಕಟೇಶ್, ಕಾರ್ಯದರ್ಶಿ ವೇಲುಸ್ವಾಮಿ, ಅಪ್ಸರ್ ಖಾನ್ ಹಾಗು ರೈತರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News